ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿವೆ ನಾಡಿನಲ್ಲಿ ಡ್ರೋನ್ ಆಧಾರಿತ ಲಾಜಿಸ್ಟಿಕ್ ಆರಂಭಿಸಿದ ಐಟಿಬಿಪಿ

Published 11 ನವೆಂಬರ್ 2023, 4:59 IST
Last Updated 11 ನವೆಂಬರ್ 2023, 7:26 IST
ಅಕ್ಷರ ಗಾತ್ರ

ನವದೆಹಲಿ: ಕಣಿವೆ, ದುರ್ಗಮ ಹಾದಿ, ಯಾವುದೇ ಸಾರಿಗೆ ಸೌಕರ್ಯಗಳಿಲ್ಲದ ಜನವಸತಿ ಪ್ರದೇಶಗಳಿಗೆ ತ್ವರಿತಗತಿಯಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆ (ಐಟಿಬಿಪಿ) ಡ್ರೋನ್ ಆಧಾರಿತ ಲಾಜಿಸ್ಟಿಕ್ಸ್‌ ಸೇವೆ ಆರಂಭಿಸಿದೆ.

ಪ್ರತಿಕೂಲ ಹವಾಮಾನ, ಮೇಘ ಸ್ಫೋಟ, ಪ್ರವಾಹ ಹಾಗೂ ಇನ್ನಿತರ ತುರ್ತು ಸಂದರ್ಭಗಳಲ್ಲಿ ಕಣಿವೆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಆಹಾರ, ಔಷಧ ಪೂರೈಸಲು ಡ್ರೋನ್ ಲಾಜಿಸ್ಟಿಕ್ಸ್‌ ಅನ್ನು ಆರಂಭಿಸಿದೆ. 

ಐಟಿಬಿಪಿಯ ಈ ಡ್ರೋನ್ ಆಧಾರಿತ ಲಾಜಿಸ್ಟಿಕ್ ಸೇವೆಯನ್ನು ಆರಂಭಿಸಿರುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಿದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT