ನವದೆಹಲಿ: ಅಪರೂಪದ ಖನಿಜ ಪೂರೈಕೆ ಸರಪಳಿ ಕುರಿತು ವಾಷಿಂಗ್ಟನ್ನಲ್ಲಿ ನಡೆಯಲಿರುವ ಸಚಿವರ ಸಭೆಯಲ್ಲಿ ಭಾಗವಹಿಸಲು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಸೋಮವಾರದಿಂದ ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿರುವ ಸಂದರ್ಭದಲ್ಲಿ ಜೈಶಂಕರ್ ಅವರ ಭೇಟಿಯು ಮಹತ್ವ ಪಡೆದಿದೆ.

ಭೇಟಿಯ ವೇಳೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಗಳ ಜೊತೆಗೂ ಮಾತುಕತೆ ನಡೆಸಲಿದ್ದಾರೆ.

‘ಅಪರೂಪದ ಖನಿಜ ಪೂರೈಕೆ ಸರಪಳಿ ಕುರಿತು ಮಾರ್ಕೊ ರೂಬಿಯೊ ನೇತೃತ್ವದಲ್ಲಿ ನಡೆಯಲಿರುವ ಸಚಿವರ ಸಭೆಯಲ್ಲಿ ಭಾಗವಹಿಸಲು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಫೆಬ್ರುವರಿ 2ರಿಂದ 5ರವರೆಗೂ ಅಮೆರಿಕಕ್ಕೆ ತೆರಳಲಿದ್ದಾರೆ’ ಎಂದು ವಿದೇಶಾಂಗ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಾಗತಿಕ ಮಟ್ಟದ ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ತಯಾರಿಕಾ ಉದ್ಯಮ, ರಕ್ಷಣೆ, ಆರೋಗ್ಯ ವಲಯದ ಅನೇಕ ಕಂಪನಿಗಳು ಅಪರೂಪದ ಖನಿಜಗಳನ್ನು ಅವಲಂಬಿಸಿವೆ. ಸಭೆಯಲ್ಲಿ ನಿರ್ಣಾಯಕ ಖನಿಜದಲ್ಲಿ ಕಾರ್ಯತಂತ್ರ ಸಹಕಾರ, ಶುದ್ಧ ಇಂಧನ ಪರಿವರ್ತನೆಯ ಕುರಿತಂತೆ ಚರ್ಚೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.