ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇದೇ ಮೊದಲ ಬಾರಿಗೆ ಜಮೈಕಾ ಪ್ರಧಾನಿ ಭಾರತ ಪ್ರವಾಸ: ನಾಳೆಯಿಂದ 4 ದಿನ ಭೇಟಿ

ನಾಲ್ಕು ದಿನಗಳ ಭಾರತ ಪ್ರವಾಸಕ್ಕಾಗಿ ಜಮೈಕಾದ ಪ್ರಧಾನ ಮಂತ್ರಿ ಆ್ಯಂಡ್ರ್ಯೂ ಹೋಲ್‌ನೆಸ್ ಅವರು ನಾಳೆ (ಸೆ.30) ದೆಹಲಿಗೆ ಆಗಮಿಸಲಿದ್ದಾರೆ.
Published : 29 ಸೆಪ್ಟೆಂಬರ್ 2024, 11:30 IST
Last Updated : 29 ಸೆಪ್ಟೆಂಬರ್ 2024, 11:30 IST
ಫಾಲೋ ಮಾಡಿ
Comments

ನವದೆಹಲಿ: ನಾಲ್ಕು ದಿನಗಳ ಭಾರತ ಪ್ರವಾಸಕ್ಕಾಗಿ ಜಮೈಕಾದ ಪ್ರಧಾನ ಮಂತ್ರಿ ಆ್ಯಂಡ್ರ್ಯೂ ಹೋಲ್‌ನೆಸ್ ಅವರು ನಾಳೆ (ಸೆ.30) ದೆಹಲಿಗೆ ಆಗಮಿಸಲಿದ್ದಾರೆ.

ಈ ವೇಳೆ ಭಾರತ–ಜಮೈಕಾ ನಡುವಿನ ವ್ಯಾಪಾರ, ಹೂಡಿಕೆ ಸಂಬಂಧಿ ಮಾತುಕತೆ ನಡೆಸಿ, ಹಲವು ಒಪ್ಪಂದಗಳಿಗೆ ಅವರು ಸಹಿ ಹಾಕಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಮೈಕಾದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ.

ಜಮೈಕಾ ಪ್ರಧಾನ ಮಂತ್ರಿಯವರ ಈ ಭೇಟಿಯು ಉಭಯ ದೇಶಗಳ ನಡುವಿನ ದೀರ್ಘಕಾಲದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಭೇಟಿಯ ವೇಳೆ ಆ್ಯಂಡ್ರ್ಯೂ ಹೋಲ್‌ನೆಸ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೊತೆ ಮಾತುಕತೆ ನಡೆಸಲಿದ್ದಾರೆ.

ಕೇರಿಬಿಯನ್ ದ್ವೀಪ ರಾಷ್ಟ್ರವಾದ ಜಮೈಕಾದೊಂದಿಗೆ ಭಾರತ ಸ್ವಾತಂತ್ರಾಪೂರ್ವದಿಂದಲೂ ಸಂಬಂಧ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT