ಇನ್ನುಳಿದ ಸ್ಪರ್ಧಿಗಳು ಯಾರು ಎನ್ನುವುದು ಕಾರ್ಯಕ್ರಮ ಆರಂಭವಾದ ಬಳಿಕ ತಿಳಿದುಬರಬೇಕಿದೆ. ಈ ಬಾರಿ ಬಿಗ್‌ಬಾಸ್ ಸ್ವರ್ಗ–ನರಕ ಎನ್ನುವ ಹೊಸ ಪರಿಕಲ್ಪನೆಯಲ್ಲಿ ಪ್ರೇಕ್ಷಕರ ಎದುರು ತೆರೆದುಕೊಳ್ಳುತ್ತಿದೆ.
ಗೌತಮಿ ಜಾಧವ್, ಚೈತ್ರಾ ಕುಂದಾಪುರ, ವಕೀಲ ಜಗದೀಶ್ ಈಗಾಗಲೇ ಹಲವರಿಗೆ ಪರಿಚಿತ ಮುಖ. ಆದರೆ, ಗೋಲ್ಡ್ ಸುರೇಶ್ ಅವರ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ.
ಗೋಲ್ಡ್ ಸುರೇಶ್ ಅವರು ಬೆಳಗಾವಿ ಜಿಲ್ಲೆಯ ಅಥಣಿ ಮೂಲದವರು. ಬಹಳ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಆರಂಭದಲ್ಲಿ ಅಲ್ಲಿ ಇಲ್ಲಿ ಕೆಲಸ ಮಾಡಿ, ಬಳಿಕ ‘ಇಸ್ವಾ’ ಎಂಬ ತಮ್ಮದೇಯಾದ ಒಂದು ಇವೆಂಟ್ ಕಂಪನಿ ಸ್ಥಾಪಿಸಿದ್ದಾರೆ.
ಬಂಗಾರದ ಆಭರಣಗಳನ್ನು ಮೈತುಂಬ ಧರಿಸಿ ಓಡಾಡುವ ಫ್ಯಾಷನ್ ಹೊಂದಿರುವ ಇವರನ್ನು, ವರ್ತೂರ್ ಸಂತೋಷ್ ಅವರ ಡ್ಯೂಪ್ ಎನ್ನುತ್ತಿದ್ದಾರೆ ಹಲವರು.
ಬಂಗಾರದ ಆಭರಣಗಳನ್ನು ಮೈತುಂಬ ಧರಿಸಿ ಓಡಾಡುವುದರಿಂದಲ ಸುರೇಶ್ ಅವರನ್ನು ಗೋಲ್ಡ್ ಸುರೇಶ್ ಎಂದೇ ಕರೆಯಲಾಗುತ್ತಿದೆ.
ನಟ ಕಿಚ್ಚ ಸುದೀಪ್ ಅವರೇ ಈ ಬಾರಿಯೂ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಹೆಚ್ಚಿಸಿದೆ.