ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 11‘ ಸೆಪ್ಟೆಂಬರ್ 29ರಿಂದ ಆರಂಭವಾಗಲಿದೆ ಎಂದು ಕಲರ್ಸ್ ಕನ್ನಡ ವಾಹಿನಿ ತಿಳಿಸಿದೆ. ಈ ಕುರಿತು ಪ್ರೊಮೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ಆ್ಯಂಕರ್ ಬದಲಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ನಟ ಕಿಚ್ಚ ಸುದೀಪ್ ಅವರೇ ಶೋ ನಡೆಸಿ ಕೊಡಲಿದ್ದಾರೆ ಎನ್ನುವುದು ಖಚಿತವಾಗಿದೆ.
‘ಹತ್ತು ವರ್ಷದಿಂದ ಒಂದು ಲೆಕ್ಕ, ಈಗಿಂದು ಒಂದು ಲೆಕ್ಕ‘ ಎಂದು ತಮ್ಮದೇ ಸಿನಿಮಾದ ಡೈಲಾಗ್ ನೆನಪಿಸುವ ಡೈಲಾಗ್ ಅನ್ನು ಪ್ರೊಮೊದಲ್ಲಿ ಸುದೀಪ್ ಅವರು ಹೇಳಿದ್ದಾರೆ. ‘ಮಾತಿಗೆ ಮಾತು, ಸೇಡಿಗೆ ಸೇಡು, ಯುದ್ಧ ಮಾಡೋರು ಬದಲಾಗುತ್ತಾರೆ. ಆದರೆ ಎಲ್ಲರನ್ನೂ ನಿಯಂತ್ರಿಸುವ ಸೂತ್ರಧಾರ ಬದಲಾಗಲ್ಲ‘ ಎಂದು ಖಡಕ್ ಆಗಿ ಹೇಳಿದ್ದಾರೆ.
ಪ್ರೊಮೊ ಸಿನಿಮೀಯ ರೀತಿಯಲ್ಲಿ ಮೂಡಿ ಬಂದಿದ್ದು ಕೆಜಿಎಫ್ ಸಿನಿಮಾದ ಬಿಲ್ಡಫ್ ಸೀನ್ ಅನ್ನು ನೆನಪಿಸುವಂತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಯಾರು? ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಸಾರಿ ಹಲವು ಅಚ್ಚರಿಗಳನ್ನು ಈ ಸೀಸನ್ ಹೊತ್ತು ತರಲಿದೆ ಎನ್ನಲಾಗಿದೆ.