ಶ್ರೀನಗರ: ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆ ನಿಗ್ರಹಿಸಲು ಗುಂಡಿನ ಚಕಮಕಿ ಜೊತೆಗೆ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸಿರುವ ಪೊಲೀಸರು, ಅವರಿಗೆ ಸಿಗುತ್ತಿದ್ದ ನೆರವಿನ ಜಾಲವನ್ನು ನಿರ್ನಾಮಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ತನಿಖಾ ಸಂಸ್ಥೆಗಳ ಜೊತೆಗೂಡಿ ಸಿಮ್ ಕಾರ್ಡ್ ಮಾರಾಟಗಾರರ ಪರಿಶೀಲನೆ, ಜೈಲಿನೊಳಗೆ ಏಕಾಏಕಿ ದಾಳಿ ನಡೆಸಿ ಉಗ್ರ ಚಟುವಟಿಕೆ ವಿಸ್ತರಣೆಯಾಗದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ. ಕಳೆದೊಂದು ವಾರದಿಂದ ಪಾಕಿಸ್ತಾನ ಮೂಲದ ಭಯೋತ್ಪಾದಕರ ಜೊತೆ ಸಂಬಂಧ ಹೊಂದಿರುವ ಹಾಗೂ ಶರಣಾಗತಿಯಾದ ಉಗ್ರರು ಹಾಗೂ ದೇಶ ವಿರೋಧಿ ಕೃತ್ಯ ನಡೆಸುವ ಸ್ಥಳಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.

‘ರಾಷ್ಟ್ರವಿರೋಧಿ ಜಾಲಗಳು ಮತ್ತೆ ಗುಂಪುಗೂಡದಂತೆ ಹಾಗೂ ಕಾರ್ಯಾಚರಿಸದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಕಲಿ ವಿಳಾಸಗಳನ್ನು ನೀಡಿ, ಖರೀದಿಸಿದ ಸಿಮ್ ಕಾರ್ಡ್ಗಳನ್ನು ಪಾಕಿಸ್ತಾನದ ಮೂಲದ ಹ್ಯಾಂಡ್ಲರ್ಗಳು ಇದನ್ನು ಬಳಸುತ್ತಾರೆ. ಸುರಕ್ಷಿತ ಸಂವಹನ ಮಾರ್ಗ ಬಳಸಲು ಸ್ಥಳೀಯ ಭೂಗತ ಜಾಲಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ತೊಡೆದುಹಾಕಲು ಕೆಲಸ ಮಾಡಲಾಗುತ್ತಿದೆ. ಉಗ್ರರ ನಿಗ್ರಹದ ಜೊತೆಗೆ ಅವರ ಅವರಿಗೆ ಸಿಗುತ್ತಿದ್ದ ನೆರವಿನ ಸರಪಳಿ ಜಾಲವನ್ನು ಮುರಿಯುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ’ ಎಂದು ವಿವರಿಸಿದ್ದಾರೆ.

ಇದರ ಜೊತೆಗೆ, ‘ಪೊಲೀಸರು ಹಾಗೂ ಗುಪ್ತಚರ ತಂಡದ ಸದಸ್ಯರು ಅನಂತನಾಗ್, ಕುಪ್ವಾರಾ ಹಾಗೂ ಬಾರಾಮುಲ್ಲಾ ಜಿಲ್ಲೆಗಳ ಜೈಲಿನೊಳಗಡೆ ದಿಢೀರ್ ಶೋಧ ಕಾರ್ಯ ನಡೆಸಿ, ಬಂಧಿತ ಉಗ್ರರು ಬಳಸುತ್ತಿದ್ದ ಮೊಬೈಲ್ ಫೋನ್, ಸಿಮ್ ಕಾರ್ಡ್, ಮಾಹಿತಿ ಬರೆದಿಟ್ಟ ನೋಟ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ’ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.