ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಇಇ–ಮೇನ್‌ ಪಠ್ಯಕ್ರಮ ಪರಿಷ್ಕರಣೆ

Published 2 ನವೆಂಬರ್ 2023, 19:44 IST
Last Updated 2 ನವೆಂಬರ್ 2023, 19:44 IST
ಅಕ್ಷರ ಗಾತ್ರ

ನವದೆಹಲಿ: ಸಿಬಿಎಸ್‌ಇ ಮತ್ತು ಇತರೆ ಶಾಲಾ ಮಂಡಳಿಗಳ ಪರಿಷ್ಕೃತ ಪಠ್ಯಕ್ರಮಗಳಿಗೆ ಅನುಗುಣವಾಗಿ ಜೆಇಇ–ಮೇನ್‌ ಪರೀಕ್ಷೆಯ ಪಠ್ಯಕ್ರಮವನ್ನೂ ಪರಿಷ್ಕರಿಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ, ಪರೀಕ್ಷಾ ಸಂಸ್ಥೆಯು ಗುರುವಾರ 2024ರ ಜನವರಿ ತಿಂಗಳಲ್ಲಿ ನಡೆಯುವ ಜೆಇಇ–ಮೇನ್‌ ಪರೀಕ್ಷೆ, ಆನ್‌ಲೈನ್ ಮೂಲಕ ನೋಂದಣಿಗೆ ವೇಳಾಪಟ್ಟಿ ಕುರಿತು ಅಧಿಸೂಚನೆ ಹೊರಡಿಸಿದೆ.

ಇದೇ ಮೊದಲ ಬಾರಿಗೆ ಎನ್‌ಟಿಎ ಫಲಿತಾಂಶ ಪ್ರಕಟಿಸುವ ದಿನಾಂಕವನ್ನು ಮುಂದಾಗಿಯೇ ಪ್ರಕಟಿಸಿದೆ. ಅದರ ಪ್ರಕಾರ, ಜೆಇಇ–ಮೇನ್‌ ಪರೀಕ್ಷೆಯ ಫಲಿತಾಂಶವು ಫೆಬ್ರುವರಿ 12, 2024ರಂದು ಪ್ರಕಟವಾಗಲಿದೆ.

ಸಿಬಿಎಸ್‌ಇ ಸೇರಿದಂತೆ ವಿವಿಧ ಶಿಕ್ಷಣ ಮಂಡಳಿಗಳು ಕೋವಿಡ್‌ನಿಂದ ಶೈಕ್ಷಣಿಕ ವೇಳಾಪಟ್ಟಿ ಮೇಲಾಗಿದ್ದ ಪರಿಣಾಮದ ಹಿನ್ನೆಲೆಯಲ್ಲಿ ಪಠ್ಯಕ್ರಮ ಬದಲಿಸಿದ್ದವು. 44 ಶಿಕ್ಷಣ ಮಂಡಳಿಗಳು ಈ ಕುರಿತು ಪ್ರತಿಕ್ರಿಯೆ ನೀಡಿದ್ದವು. ಎನ್‌ಸಿಇಆರ್‌ಟಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ಬದಲಾದ ಪಠ್ಯಕ್ರಮಗಳಿಗೆ ಅನುಗುಣವಾಗಿ ಜೆಇಇ–ಮೇನ್‌ ಪಠ್ಯಕ್ರಮದಲ್ಲೂ ಬದಲಾವಣೆ ತರಲಾಯಿತು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT