ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ ಉದ್ಘಾಟನೆ: ದೀಪಾವಳಿಯಂತೆ ಆಚರಿಸಿ: ವಿಎಚ್‌ಪಿ

Published 10 ಜನವರಿ 2024, 15:16 IST
Last Updated 10 ಜನವರಿ 2024, 15:16 IST
ಅಕ್ಷರ ಗಾತ್ರ

ರಾಂಚಿ: ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ದಿನವನ್ನು (ಜ.22) ದೀಪಾವಳಿಯಂತೆ ಸಂಭ್ರಮದಿಂದ ಆಚರಿಸಿ ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ರಾಷ್ಟ್ರೀಯ ವಕ್ತಾರ ವಿನೋದ್‌ ಬನ್ಸಾಲ್ ಅವರು ಮನವಿ ಮಾಡಿದ್ದಾರೆ.

ರಾಮ ಮಂದಿರ ಟ್ರಸ್ಟ್‌ ಆಹ್ವಾನ ನೀಡಿದವರು ಮಾತ್ರ ಪವಿತ್ರ ಅಯೋಧ್ಯೆ ನಗರಕ್ಕೆ ಅಂದು ಭೇಟಿ ನೀಡಬೇಕು. ಹೀಗಾಗಿ ಸಮೀಪದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸಿ ಎಂದು ಕರೆ ನೀಡಿದ್ದಾರೆ.

‘ಅಂದು ನಾನೂ ಅಯೋಧ್ಯೆಗೆ ಹೋಗುವುದಿಲ್ಲ. ಸಮೀಪದ ದೇಗುಲವನ್ನೇ ರಾಮ ಮಂದಿರ ಎಂದು ಪರಿಗಣಿಸುತ್ತೇನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT