ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಕಾಶ್ಮೀರ: ಕಮರಿಗೆ ವಾಹನ ಬಿದ್ದು 11 ಜನ ಸಾವು, ಮೂವರಿಗೆ ಗಾಯ 

Last Updated 16 ಮಾರ್ಚ್ 2019, 18:11 IST
ಅಕ್ಷರ ಗಾತ್ರ

ಬನಿಹಾಲ್/ ಜಮ್ಮು: ರಾಮಬಂದ್‌ ಜಿಲ್ಲೆಯ ಕುಂಡ ನಲ್ಲಾ ಬಳಿ 15 ಜನ ಪ್ರಯಾಣಮಾಡುತ್ತಿದ್ದ ವಾಹನ 500 ಅಡಿ ಕಂದರಕ್ಕೆ ಬಿದ್ದು, ನಾಲ್ವರು ಮಹಿಳೆಯರು, ಐದು ಮಕ್ಕಳು ಸೇರಿ 11 ಜನ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾದೇರ್‌ಕೋಟದಿಂದ ರಾಜ್‌ಘರ್‌ಗೆ ಪ್ರಯಾಣ ಮಾಡುತ್ತಿದ್ದ ವಾಹನ ಶನಿವಾರ ಬೆಳಿಗ್ಗೆ 10.30ಕ್ಕೆ ಚಾಲಕನ ನಿಯಂತ್ರಣ ಕಳೆದುಕೊಂಡು ಕಂದರಕ್ಕೆ ಉರುಳಿದೆ ಎಂದು ತಿಳಿಸಿದ್ದಾರೆ.

ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿ, ಉಳಿದವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಮೂವರನ್ನು ಹೆಲಿಕಾಪ್ಟರ್‌ ಮೂಲಕ ಜಮ್ಮುಗೆ ರವಾನಿಸಲಾಗಿದೆ.

7 ಮಂದಿಯಷ್ಟೇ ಕುಳಿತುಕೊಳ್ಳಲು ಸಾಧ್ಯವಿರುವ ವಾಹನದಲ್ಲಿ 15 ಜನರನ್ನು ಕೂರಿಸಿಕೊಂಡು ಪ್ರಯಾಣ ಮಾಡುತ್ತಿದ್ದ ಚಾಲಕನ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ತಿಂಗಳ ಮಗುವೊಂದು ಸೇರಿ, ರೋಮಾಲ್ ದಿನ್ (61), ಮೊಹಮ್ಮದ್ ಮುಬೆನ್ (23), ರುಬಿನಾ ಬೇಗಮ್ (30), ಊರ್ಮಿಳಾ ದೇವಿ (32), ಬಾಬ್ಲಿ ದೇವಿ (37), ಐಮಾನೊ ಬಾನೊ (13), ಅರ್ಜುನ್ (9), ಪಾರಿ (2) ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT