ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ.ವಿ. ಪತ್ರಕರ್ತೆ ಸೌಮ್ಯಾ ತಂದೆ ವಿಶ್ವನಾಥನ್ ನಿಧನ

Published 10 ಡಿಸೆಂಬರ್ 2023, 6:16 IST
Last Updated 10 ಡಿಸೆಂಬರ್ 2023, 6:16 IST
ಅಕ್ಷರ ಗಾತ್ರ

ಚೆನ್ನೈ: ದೆಹಲಿಯಲ್ಲಿ 2008ರಲ್ಲಿ ನಡೆದಿದ್ದ ಟಿ.ವಿ. ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ದೆಹಲಿ ನ್ಯಾಯಾಲಯ  ಜೀವಾವಧಿ ಶಿಕ್ಷೆ ವಿಧಿಸಿದ ಎರಡು ವಾರಗಳ ನಂತರ ಸೌಮ್ಯಾ ತಂದೆ ವಿಶ್ವನಾಥನ್‌ ಮೃತಪಟ್ಟಿದ್ದಾರೆ.

ವಿಶ್ವನಾಥನ್‌ ಅವರಿಗೆ 82 ವರ್ಷ ವಯಸ್ಸಾಗಿತ್ತು. ತಮ್ಮ ಮಗಳ 41ನೇ ಹುಟ್ಟುಹಬ್ಬದ ಒಂದು ದಿನದ ನಂತರ ಅವರು ನಿಧನರಾಗಿದ್ದಾರೆ.

ಅಪರಾಧಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜೀತ್ ಮಲಿಕ್ ಮತ್ತು ಅಜಯ್ ಕುಮಾರ್‌ಗೆ ಎಂಬುವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

 ಪ್ರಕರಣದ ಹಿನ್ನೆಲೆ:

ಪತ್ರಕರ್ತೆ ಸೌಮ್ಯ ಅವರು, 2008ರ ಸೆ.30ರಂದು ಮುಂಜಾನೆ 3.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ತನ್ನ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ದರೋಡೆ ಮಾಡುವ ಉದ್ದೇಶದಿಂದ ವಸಂತ ವಿಹಾರ್‌ ಬಳಿ ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಅವರ ತಲೆಗೆ ಗುಂಡು ಹಾರಿಸಿ ಹತ್ಯೆಗೈದಿದ್ದರು. ಈ ಕೃತ್ಯ ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT