ನವದೆಹಲಿ: ಅಂತರರಾಷ್ಟ್ರೀಯ ಕಾನೂನುಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ನ್ಯಾಯಮುರ್ತಿ ಅರುಣ್‌ಮಿಶ್ರಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳಿರುವುದನ್ನು ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಶ್ನಿಸಿದೆ.

‘ಬಹುಮುಖ ಪ್ರತಿಭೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ, ಜಾಗತಿಕವಾಗಿಚಿಂತಿಸುತ್ತಾರೆಮತ್ತು ಸ್ಥಳೀಯವಾಗಿ ಸ್ಪಂದಿಸುತ್ತಾರೆ (Thinks globally and acts locally) ಎಂದು ನ್ಯಾಯಮೂರ್ತಿ ಮಿಶ್ರಾ ಅವರು ಸಮಾರಂಭದಲ್ಲಿ ಹೇಳಿದ್ದರು.

ನ್ಯಾಯಮೂರ್ತಿಮಿಶ್ರಾಅವರು ಕಾರ್ಯಕ್ರಮದ ವಂದನಾರ್ಪಣೆಯಲ್ಲಿ ಪ್ರಧಾನಿಯವರನ್ನು ಅತಿಯಾಗಿಹೊಗಳಿದ್ದಾರೆ ಎಂದುಬಾರ್ಅಸೋಸಿಯೇಷನ್ಆಫ್ ಇಂಡಿಯಾ ಅಭಿಪ್ರಾಯಪಟ್ಟಿದೆ.

‘ಆಳುವವರ ವಿರುದ್ಧ ದೂರುಗಳು ಬಂದಾಗ ಸಂವಿಧಾನ ಮತ್ತು ಕಾನೂನನ್ನು ಮಾನದಂಡವಾಗಿರಿಸಿಕೊಂಡುಸುಪ್ರೀಂಕೊರ್ಟ್‌ನ ನ್ಯಾಯಮೂರ್ತಿಗಳುಕ್ರಮ ಕೈಗೊಳ್ಳಬೇಕು. ನ್ಯಾಯಾಂಗ ನಿಷ್ಪಕ್ಷಪಾತವಾಗಿ ಮತ್ತುಸ್ವತಂತ್ರವಾಗಿಕಾರ್ಯನಿರ್ವಹಿಸುತ್ತಿದೆ ಎಂಬ ಜನರ ನಂಬಿಕೆಯನ್ನು ಇಂಥ ಹೇಳಿಕೆಗಳುದುರ್ಬಲಗೊಳಿಸುವ ಸಾಧ್ಯತೆ ಇದೆ’ ಎಂದುಬಾರ್ಅಸೋಸಿಯೇಷನ್ಅಭಿಪ್ರಾಯಪಟ್ಟಿದೆ.

ಆಡಳಿತಾಂಗಮತ್ತು ಶಾಸಕಾಂಗದ ನಡುವೆ ಗೌರವಯುತ ಅಂತರವನ್ನು ಕಾಯ್ದುಕೊಳ್ಳಬೇಕಾದದು ನ್ಯಾಯಮೂರ್ತಿಗಳ ಮೂಲ ಕರ್ತವ್ಯ. ನ್ಯಾಯ ಮತ್ತುಪಾರದರ್ಶಕತೆಯನ್ನು ಜನಸಾಮಾನ್ಯರು ನ್ಯಾಯಾಲಯದಿಂದ ನಿರೀಕ್ಷಿಸುತ್ತಾರೆಎಂದು ಬಾರ್ ಅಸೋಸಿಯೇಷನ್ಹೇಳಿದೆ.

ಸ್ವಾತಂತ್ರ್ಯನ್ಯಾಯಾಂಗ ವ್ಯವಸ್ಥೆಬಲಪಡಿಸಲುನಿಟ್ಟಿನಲ್ಲಿ ನಿರಂತರಎಚ್ಚರಿಕೆವಹಿಸಬೇಕು ಎಂದುಬಾರ್ಅಸೋಸಿಯೇಷನ್ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.