ನವದೆಹಲಿ: ‘ಮಕ್ಕಳು ಹುಟ್ಟು ಅಪರಾಧಿಗಳಲ್ಲ. ಪಾಲಕರು ಹಾಗೂ ಸಮಾಜದ ನಿರ್ಲಕ್ಷ್ಯದಿಂದ ಅವರು ಇಂಥ ಸ್ಥಿತಿಗೆ ತಲುಪಿರುತ್ತಾರೆ. ಇಂಥ ಸಮಸ್ಯೆಗೆ ಸಿಲುಕಿದ ಮಕ್ಕಳನ್ನು ಸರಿದಾರಿಯೆಡೆಗೆ ತರಲು ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಪಣ ತೊಡಬೇಕಿದೆ’ ಎಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅಭಿಪ್ರಾಯಪಟ್ಟರು.

‘ಕಾನೂನಡಿಯಲ್ಲಿ ಸಂಘರ್ಷದಲ್ಲಿರುವ ಮಕ್ಕಳ ನ್ಯಾಯ ಹಾಗೂ ಮಕ್ಕಳ ಯೋಗಕ್ಷೇಮ’ ಎಂಬ ವಿಷಯ ಕುರಿತು ಸುಪ್ರೀಂ ಕೋರ್ಟ್ ಸಮಿತಿಯು ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಸಮಾಲೋಚನಾ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.

‘ತನಗೆ ಬೇಕಾದ ನೆರವನ್ನು ಪಡೆಯಲು ಯಾವ ಮಗುವೂ ಅಪರಾಧ ಕೃತ್ಯ ಎಸಗಬೇಕಾಗಿಲ್ಲ. ಆದರೆ ಸಮಾಜದ ಸರಿಯಾದ ನೆರವು ಸಿಗದ ಹೊರತು ಅಪರಾಧ ಕೃತ್ಯಗಳಿಗೆ ಕೈಹಾಕುವ ಮಗುವಿನ ನೈಜ ಆಸಕ್ತಿಯನ್ನು ರಕ್ಷಿಸಿದಂತಾಗುವುದಿಲ್ಲ’ ಎಂದು ಅವರು ಹೇಳಿದರು.

‘ಬೀದಿ ಬದಿಯಲ್ಲಿ, ರೈಲ್ವೆ ನಿಲ್ದಾಣಗಳ ಪ್ಲಾಟ್ಫಾರ್ಮ್ನಲ್ಲಿ ಅಥವಾ ಇನ್ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಒಬ್ಬರೇ ಇರುವ ಮಕ್ಕಳ ರಕ್ಷಣೆಗೆ ಸಮಾಜ ಧಾವಿಸಬೇಕಿದೆ. ಹೀಗೆ ರಕ್ಷಣಾ ಘಟಕಗಳಿಗೆ ಸೇರುವ ಮಕ್ಕಳ ಸುರಕ್ಷತೆ, ಘತನೆ ಮತ್ತು ರಕ್ಷಣೆಯನ್ನು ಸದಾ ಕಾಪಾಡಿಕೊಳ್ಳಬೇಕು. ಒಂದೊಮ್ಮೆ ಮಕ್ಕಳ ಹಕ್ಕುಗಳ ರಕ್ಷಣೆ ಖಾತ್ರಿಯಾದಲ್ಲಿ, ಸಮಾಜ, ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಕಾರ್ಯ ಸಾರ್ಥಕವಾದಂತೆ’ ಎಂದರು.

‘ಹೀಗಾಗಿ ಕಾನೂನಿನ ಚೌಕಟ್ಟಿನಡಿಯಲ್ಲಿ ಮಕ್ಕಳ ರಕ್ಷಣೆಗೆ ಎಲ್ಲಾ ನಾಗರಿಕರು ಪ್ರತಿಜ್ಞೆ ಮಾಡಬೇಕು. ನಮ್ಮ ಸಮುದಾಯದ ಪ್ರಮುಖ ಗುರಿಯೇ ಮಕ್ಕಳ ರಕ್ಷಣೆ ಮತ್ತು ಅವರ ಉತ್ತೇಜನವಾಗಿದೆ’ ಎಂದು ನ್ಯಾ. ನಾಗರತ್ನಾ ಹೇಳಿದರು.

‘ಕಾನೂನಡಿ ಸಂಘರ್ಷದಲ್ಲಿರುವ ಮಕ್ಕಳ ನ್ಯಾಯ ಕಾನೂನು ಮತ್ತು ಅದರ ಅನುಷ್ಠಾನದ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ. ಕೆಲವೊಂದು ನೋಂದಾಯಿತ ಬಾಲ ಮಂದಿರಗಳಲ್ಲೇ ಮಕ್ಕಳು ದೌರ್ಜನ್ಯಕ್ಕೆ ಒಳಗಾದ ಉದಾಹರಣೆಗಳು ಇವೆ’ ಎಂದು ಅವರು ಮುಜಾಫರ್ಪುರ್ ಬಾಲ ಮಂದಿರ ಪ್ರಕರಣವನ್ನು ಉಲ್ಲೇಖಿಸಿದರು.

‘ಬಹಳಷ್ಟು ಬಾಲ ಮಂದಿರಗಳನ್ನು ಸರ್ಕಾರೇತರ ಸಂಸ್ಥೆಗಳು ನಡೆಸುತ್ತಿವೆ. ಇಂಥಲ್ಲಿ ಮಕ್ಕಳ ರಕ್ಷಣೆ ಹಾಗೂ ಅದರ ಗುಣಮಟ್ಟದ ಖಾತ್ರಿಪಡಿಸುವುದು ತೀರಾ ಅಗತ್ಯವಾಗಿದೆ. 2020ರ ಎನ್ಸಿಪಿಸಿಆರ್ ವರದಿ ಪ್ರಕಾರ 7,163 ನೋಂದಾಯಿತ ಬಾಲ ಮಂದಿರಗಳು ಇವೆ. ಇವುಗಳು ಅನಾಥ ಮಕ್ಕಳಿಗೆ ನೆಲೆ ಒದಗಿಸುತ್ತಿವೆ. ಜತೆಗೆ ದತ್ತು ಏಜೆನ್ಸಿ, ನಿರೀಕ್ಷಣಾ ಕೊಠಡಿಗಳು, ಅನಾಥಾಲಯ, ವಿಶೇಷ ಗೃಹ ಇತ್ಯಾದಿಗಳೂ ಇಲ್ಲಿವೆ. ಇವುಗಳನ್ನು 6,299 ಅಥವಾ ಶೇ 88ರಷ್ಟು ಎನ್ಜಿಒಗಳೇ ನಿರ್ವಹಿಸುತ್ತಿವೆ. ಆದರೆ ಸರ್ಕಾರ ನಡೆಸುತ್ತಿರುವ ಇಂಥ ಸಂಸ್ಥೆಗಳ ಸಂಖ್ಯೆ 864 ಮಾತ್ರ’ ಎಂದು ವಿವರಿಸಿದರು.

‘ಕೆಲವೊಂದು ಅನಿರೀಕ್ಷಿತ ಘಟನೆಗಳಿಂದ ಜನ್ಮ ಪಡೆದ ಮಕ್ಕಳ ಬದುಕು ಇಂಥ ಅಪರಾಧ ಹಾಗೂ ಅಹಿಂಸೆಯ ಮಾರ್ಗಕ್ಕೆ ನೂಕಲ್ಪಡುವುದನ್ನು ಗಮನಿಸಲಾಗಿದೆ. ಹೀಗಾಗಿ ಮಕ್ಕಳು 18 ವರ್ಷವನ್ನು ತಲುಪುವವರೆಗೂ ಸರ್ಕಾರವನ್ನೂ ಒಳಗೊಂಡ ಮಕ್ಕಳ ಅಭಿವೃದ್ಧಿ ಯೋಜನೆಗಳು ಜಾರಿಯಲ್ಲಿರಬೇಕು. ಇದರಿಂದ ಅವರಿಗೆ ಅಗತ್ಯವಿರುವ ಮೂಲ ಸೌಲಭ್ಯಗಳು ಸಿಗುವುದರಿಂದ ಬಾಲಾಪರಾಧಗಳ ಸಂಖ್ಯೆ ತಗ್ಗಿಸಬಹುದಾಗಿದೆ’ ಎಂದು ನ್ಯಾ. ನಾಗರತ್ನಾ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಿ ಸ್ಮೃತಿ ಇರಾನಿ, ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಹಾಗೂ ಸಮಿತಿಯ ಅಧ್ಯಕ್ಷ ನ್ಯಾ. ಎಸ್.ರವೀಂದ್ರ ಭಟ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.