ಸೂರತ್: ಕಾಶ್ಮೀರದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ನಿರಾಕರಿಸಲಾಗುತ್ತಿದೆ ಎಂದು ಎಂದು ಹೇಳಿ ರಾಜೀನಾಮೆ ನೀಡಿದ್ದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಸಂಪರ್ಕ ನಿರ್ಬಂಧಿಸಿ ಜೀವಹಾನಿ ತಡೆದಿದ್ದೇವೆ

ದಾಮನ್ ಮತ್ತು ದಿಯು, ದಾದ್ರ ಮತ್ತು ನಾಗರಹವೇಲಿ (ಡಿಡಿಡಿಎನ್ಎಚ್) ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ರಾಜೀನಾಮೆ ನೀಡಿದ್ದರೂ ಅದನ್ನು ಅಲ್ಲಿನ ಆಡಳಿತಾಧಿಕಾರಿಗಳು ಸ್ವೀಕರಿಸಿರಲಿಲ್ಲ. ಕರ್ತವ್ಯಕ್ಕೆ ಹಾಜರಾಗುವಂತೆ ಅಲ್ಲಿನ ಅಲ್ಲಿನ ಆಡಳಿತಾಧಿಕಾರಿಗಳು ನೋಟಿಸ್ ಕಳುಹಿಸಿದ್ದು, ಕಣ್ಣನ್ ತಾನು ಹಾಜರಾಗಲ್ಲ ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಬುಧವಾರ ನಾನು ಸಿಲ್ವಸ್ಸಾದಲ್ಲಿರುವ ಮನೆಗೆ ವಾಪಸ್ ಬಂದೆ. ಅಲ್ಲಿ ಮನೆ ಬಾಗಿಲಿಗೆ ನೋಟಿಸ್ ಅಂಟಿಸಲಾಗಿತ್ತು. ರಾಜೀನಾಮೆ ಸ್ವೀಕರಿಸುವ ಅವಧಿವರೆಗೆ ನಾನು ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ. ನಾನು ರಾಜೀನಾಮೆ ನೀಡುವಿ ವಿಚಾರವನ್ನು ಸಾರ್ವಜನಿಕವಾಗಿಯೇ ತಿಳಿಸಿದ್ದೆ. ಆ ನಿರ್ಧಾರವನ್ನು ನಾನು ಬದಲಾಯಿಸುವುದಿಲ್ಲ. ರಾಜೀನಾಮೆ ಸ್ವೀಕರಿಸುವ ವರೆಗಿನ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವುದು ನನಗೆ ಸರಿ ಅನಿಸುತ್ತಿಲ್ಲ.

ನಾನು ಮುಂದಿನ ಜೀವನದ ಬಗ್ಗೆ ಯೋಚಿಸಿಲ್ಲ.ಸಾರ್ವಜನಿಕ ಸೇವೆ ಮಾಡುತ್ತಿರುವ ಖಾಸಗಿ ಸಂಸ್ಥೆಗಳೊಂದಿಗಿನ ಕೆಲಸ ಕಾರ್ಯ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಕಳೆದ ಒಂದು ವಾರ ತುಂಬಾ ಬ್ಯುಸಿಯಾಗಿದ್ದ ಕಾರಣ ಈ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗಿಲ್ಲ ಎಂದುಕಣ್ಣನ್ ಹೇಳಿದ್ದಾರೆ.
ಜನರು ಮತ್ತು ಜನರ ಸೇವೆಗೆಂದು ನಿಯೋಜಿತರಾದ ಅಧಿಕಾರಗಳ ಧ್ವನಿಯನ್ನು ಸರ್ಕಾರ ಅಡಗಿಸುತ್ತಿದೆ. ಇದರಿಂದ ಮನನೊಂದು ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕಣ್ಣನ್ ಹೇಳಿರುವುದಾಗಿ ಸುದ್ದಿಮೂಲಗಳು ವರದಿ ಮಾಡಿದ್ದವು.

ಇದನ್ನೂ ಓದಿ:ಜಮ್ಮು–ಕಾಶ್ಮೀರ: ವಿಶೇಷಾಧಿಕಾರ ರದ್ದು ವಿಚಾರಣೆ ಸಂವಿಧಾನ ಪೀಠಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.