ನವದೆಹಲಿ: ಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ಸಾಗುವ ಕಾವಡ್ ಯಾತ್ರೆಯ ಮಾರ್ಗದಲ್ಲಿ ಬರುವ ಎಲ್ಲ ಹೋಟೆಲ್ ಮಾಲೀಕರು ತಮ್ಮ ಪರವಾನಗಿ ಮತ್ತು ನೋಂದಣಿ ಪ್ರಮಾಣ ಪತ್ರವನ್ನು ಪ್ರದರ್ಶಿಸಬೇಕು, ಇದಕ್ಕಾಗಿ ಕ್ಯೂಆರ್ ಕೋಡ್ ಅಳವಡಿಸಬೇಕು ಎಂಬ ಸರ್ಕಾರದ ನಿರ್ದೇಶನಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

‘ಕಾವಡ್ ಯಾತ್ರೆಗೆ ಮಂಗಳವಾರ ಕೊನೇ ದಿನ ಎಂದು ನಮಗೆ ತಿಳಿಸಲಾಗಿದೆ. ಹೇಗಿದ್ದರೂ ಯಾತ್ರೆಯು ಅಂತ್ಯವಾಗುತ್ತಿದೆ. ಆದ್ದರಿಂದ, ಈ ಹಂತದಲ್ಲಿ ಸರ್ಕಾರದ ನಿರ್ದೇಶನವನ್ನು ಪಾಲಿಸಿ ಎಂದೇ ನಾವೂ ಹೇಳಬೇಕಾಗುತ್ತದೆ’ ಎಂದು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು ಹೇಳಿತು.

ಕ್ಯೂಆರ್ ಕೋಡ್ ಅಳವಡಿಸಬೇಕು ಎಂಬ ನಿರ್ದೇಶನದ ವಿರುದ್ಧ ಶಿಕ್ಷಣ ತಜ್ಞ ಅಪೂರ್ವಾನಂದ ಝಾ ಮತ್ತು ಇತರರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.