ಜಮ್ಮು: ಜಮ್ಮು ವಿಮಾನ ನಿಲ್ದಾಣದಲ್ಲಿನ ನೂತನ ಟರ್ಮಿನಲ್‌ಗೆ ತಮ್ಮ ತಂದೆ ‘ಮಹಾರಾಜ ಹರಿ ಸಿಂಗ್‘ ಅವರ ಹೆಸರಿಡಲು ಶಿಫಾರಸು ಮಾಡುವಂತೆ ಮಾಜಿ ಸಂಸದ ಕರಣ್ ಸಿಂಗ್ ಅವರು ಜಮ್ಮು–ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಸಿನ್ಹಾ ಅವರಿಗೆ ಪತ್ರ ಬರೆದಿರುವ ಸಿಂಗ್, ‘ಜಮ್ಮು ವಿಮಾನ ನಿಲ್ದಾಣವನ್ನು ನನ್ನ ತಂದೆ ಮಹಾರಾಜ ಹರಿ ಸಿಂಗ್ ನಿರ್ಮಾಣ ಮಾಡಿದ್ದಾರೆ. ಅದನ್ನು ಬಹಳ ವರ್ಷಗಳ ಕಾಲ ಬಳಸುತ್ತಿದ್ದರು’ ಎಂದು ವಿವರಿಸಿದ್ದಾರೆ.

‘ಸದ್ಯ ಜಮ್ಮ ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಇಲ್ಲ. ಹಾಗಾಗಿ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಹೆಸರಿಡುವ ವಿಚಾರವನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ನೀವು ಶಿಫಾರಸು ಮಾಡಬಹುದು. ನಿಮ್ಮ ಈ ಕಾರ್ಯವನ್ನು ಜಮ್ಮುವಿನ ಜನರು ಬಹಳವಾಗಿ ಮೆಚ್ಚುತ್ತಾರೆಂಬ ವಿಶ್ವಾಸ ನನಗಿದೆ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.