ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಜನತೆಗೆ ಕಾರ್ತಿಕ ಪೂರ್ಣಿಮ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

Published 27 ನವೆಂಬರ್ 2023, 3:00 IST
Last Updated 27 ನವೆಂಬರ್ 2023, 3:00 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಕಾರ್ತಿಕ ಪೂರ್ಣಿಮ ಮತ್ತು ದೇವ್‌ ದೀಪಾವಳಿ ಹಬ್ಬದ ಶುಭ ಕೋರಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಎಲ್ಲರಿಗೂ ಭಾರತೀಯ ಸಾಂಪ್ರದಯದ ಆಚರಣೆಯ ಭಾಗವಾದ ಕಾರ್ತಿಕ ಪೂರ್ಣಿಮ ಮತ್ತು ದೇವ್‌ ದೀಪಾವಳಿ ಹಬ್ಬದ ಶುಭಶಾಯಗಳು. ಈ ದಿನ ದೇಶದ ಎಲ್ಲಾ ನನ್ನ ಕುಟುಂಬ ಸದಸ್ಯರ ಜೀವನದಲ್ಲಿ ಹೊಸ ಬೆಳಕು ಹಾಗೂ ಚೈತನ್ಯ ತರಲಿ ಎಂದು ಬಯಸುತ್ತೇನೆ ಎಂದು ಮೋದಿ ತಿಳಿಸಿದ್ದಾರೆ.

ಕಾರ್ತಿಕ ಪೂರ್ಣಿಮ ಹಬ್ಬದ ಪ್ರಯುಕ್ತ ಮರಳು ಕಲಾವಿದ ಸುದರ್ಶನ್‌ ಪಟ್ನಾಯಕ್‌ ಅವರು ಮರಳು ಮತ್ತು ಹೂಗಳಿಂದ ಕೂಡಿದ ಹಡಗನ್ನು ನಿರ್ಮಿಸಿದ್ದಾರೆ.

ಕಾರ್ತಿಕ ಪೂರ್ಣಿಮ ದಿನದಂದು ಜನರು ಮುಂಜಾನೆಯೇ ವಾರಣಸಿಯ ಗಂಗಾ ನದಿಯಲ್ಲಿ ಮಿಂದು ದೀಪಗಳನ್ನು ಹಚ್ಚುವ ಮೂಲಕ ಹಬ್ಬ ಆಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT