ರುದ್ರಪ್ರಯಾಗ್: ಕೇದಾರನಾಥ ಭೂಕುಸಿತದಲ್ಲಿ ಹಾನಿಗೊಳಗಾದ ರಸ್ತೆಗಳ ರಿಪೇರಿ ಕಾರ್ಯ ಸಮರೋಪಾದಿಯಲ್ಲಿ ಮುಂದುವರಿದಿದ್ದು, ಎಂಐ–17 ಹೆಲಿಕಾಪ್ಟರ್ ಮೂಲಕ ಸಾಧುಗಳು, ಸ್ಥಳೀಯ ವ್ಯಾಪಾರಿಗಳನ್ನು ಭಾನುವಾರ ಬೆಳಿಗ್ಗೆ ಗುಪ್ತಕಾಶಿಗೆ ಕಳುಹಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಭೂಕುಸಿತಕ್ಕೆ ಒಳಗಾದ ಜಾಗದಲ್ಲಿ ಯಾರೂ ಉಳಿದಿಲ್ಲ. ಕಾರ್ಯಾಚರಣೆ ಮುಕ್ತಾಯವಾಗಿದ್ದು, ಎಂಐ–17 ಹೆಲಿಕಾಪ್ಟರ್‌ಗಳನ್ನು ಹಿಂದಕ್ಕೆ ಕಳುಹಿಸಲಾಗುವುದು’ ಎಂದರು.
ಜುಲೈ 31ರಂದು ಸುರಿದ ಭಾರಿ ಮಳೆಯಿಂದ ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಭೂಕುಸಿತ ಸಂಭವಿಸಿತ್ತು. ಇದರಿಂದ ಕೇದಾರನಾಥ, ಗೌರಿಕುಂಡ್, ಲಿಂಚೋಲಿ, ಭಿಂಬಾಲಿಯಲ್ಲಿ ಸಾವಿರಾರು ಯಾತ್ರಿಕರು ಸಿಲುಕಿಕೊಂಡಿದ್ದರು. ಹೀಗಾಗಿ, ಮರುದಿನದಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.
ಗುರುವಾರದಿಂದಲೇ ಹೆಲಿಕಾಪ್ಟರ್ ಸೇವೆ ಆರಂಭಗೊಂಡಿದೆ. ಒಂದು ವಾರ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ 15 ಸಾವಿರ ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಉತ್ತರಾಖಂಡದ ರುದ್ರಪ‍್ರಯಾಗ್ ಜಿಲ್ಲೆಯಲ್ಲಿ ಭೂಕುಸಿತದಿಂದ ಹಾನಿಗೊಳಗಾದ ರಸ್ತೆಯನ್ನು ಭಾನುವಾರ ಸರಿಪಡಿಸಿದ ಕಾರ್ಮಿಕರು–ಪಿಟಿಐ ಚಿತ್ರ