ಕಾಸರಗೋಡು: 16 ವರ್ಷದ ಬಾಲಕನ ಮೇಲೆ ಎರಡು ವರ್ಷಗಳ ಕಾಲ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸರ್ಕಾರಿ ನೌಕರ ಸೇರಿ ಒಂಬತ್ತು ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ.

‘ಲಿಂಗತ್ವ ಅಲ್ಪಸಂಖ್ಯಾತ (LGBTQ) ಸಮುದಾಯವರಿಗಾಗಿ ಅಭಿವೃದ್ಧಿಪಡಿಸಲಾದ ಮೊಬೈಲ್ ಆ್ಯಪ್ನಲ್ಲಿ ಬಾಲಕನ ಗೆಳೆತನ ಸಂಪಾದಿಸಿದ ಇವರು, ಆತನ ಮನೆ ಹಾಗೂ ಇತರ ಪ್ರದೇಶಗಳಲ್ಲಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದರಲ್ಲಿ ಒಟ್ಟು 14 ಜನ ಭಾಗಿಯಾಗಿದ್ದಾರೆ. ಕಣ್ಣೂರು ಮತ್ತು ಕೊಯಿಕ್ಕೋಡ್ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ದೌರ್ಜನ್ಯ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಾಲಕನ ತಾಯಿಯ ಕಂಡು ಅವರ ಮನೆಯಲ್ಲಿದ್ದ ಅಲ್ಲಿದ್ದ ಪುರುಷನೊಬ್ಬ ಓಡಿಹೋಗಿದ್ದ. ಇದನ್ನು ವಿಚಾರಿಸಿದಾಗ ಬಾಲಕ ನಡೆದ ಘಟನೆಯನ್ನು ತಾಯಿಗೆ ವಿವರಿಸಿದ್ದಾನೆ. ತಕ್ಷಣ ಅವರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲಿಂದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

‘ಬಾಲಕನ ಹೇಳಿಕೆ ಆಧರಿಸಿ ಪೋಕ್ಸೊ ಅಡಿಯಲ್ಲಿ 14 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಡಿವೈಎಸ್ಪಿ ಹಾಗೂ ನಾಲ್ವರು ಇನ್ಸ್ಪೆಕ್ಟರ್ ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಇದರಲ್ಲಿ ಕಾಸರಗೋಡು ಜಿಲ್ಲೆಯಲ್ಲೇ ದಾಖಲಾದ 8 ಪ್ರಕರಣಗಳ ತನಿಖೆಯನ್ನು ಇವರು ನಡೆಸಲಿದ್ದಾರೆ. ಉಳಿದ 6 ಪ್ರಕರಣಗಳನ್ನು ಕೋಯಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳ ಪೊಲೀಸರಿಗೆ ವರ್ಗಾಯಿಸಲಾಗಿದೆ. ದೌರ್ಜನ್ಯ ಎಸಗಿದವರು 25ರಿಂದ 51 ವರ್ಷದವರಾಗಿದ್ದಾರೆ. ಇದರಲ್ಲಿ ಒಬ್ಬರು ರೈಲ್ವೆ ಇಲಾಖೆಯ ನೌಕರ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.