ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಸಿಸಿ: ಬಿಜೆಪಿಯ ಚುನಾವಣಾ ಕಾರ್ಯಸೂಚಿ– ಪಿಣರಾಯಿ ವಿಜಯನ್‌ ಆರೋಪ

Published 30 ಜೂನ್ 2023, 15:31 IST
Last Updated 30 ಜೂನ್ 2023, 15:31 IST
ಅಕ್ಷರ ಗಾತ್ರ

ತಿರುವನಂತಪುರ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತ ಪ್ರಸ್ತಾಪದ ಹಿಂದೆ ಬಿಜೆಪಿಯ ಚುನಾವಣಾ ಕಾರ್ಯಸೂಚಿ ಅಡಗಿದೆ ಎಂದು ದೂರಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು, ಯುಸಿಸಿ ಹೇರುವ ಕ್ರಮದಿಂದ ಕೇಂದ್ರ ಸರ್ಕಾರವು ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.

‘ಕೇಂದ್ರ ಸರ್ಕಾರದ ಈ ನಡೆಯು, ದೇಶದ ಸಾಂಸ್ಕೃತಿಕ ವೈವೀಧ್ಯತೆಯನ್ನು ಅಳಿಸುವ ಮೂಲಕ ಒಂದು ರಾಷ್ಟ್ರ, ಒಂದು ಸಂಸ್ಕೃತಿ ಎಂಬ ಬಹುಸಂಖ್ಯಾತರ ಕೋಮುವಾದಿ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವ ಯೋಜನೆಯಂತಿದೆ’ ಎಂದು ಸಿಪಿಐ(ಎಂ)ನ ಹಿರಿಯ ನಾಯಕರೂ ಆಗಿರುವ ವಿಜಯನ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯುಸಿಸಿ ಹೇರುವ ಕ್ರಮದಿಂದ ಕೇಂದ್ರ ಸರ್ಕಾರ ಮತ್ತು ಕಾನೂನು ಆಯೋಗ ಹಿಂದೆ ಸರಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT