ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಪ್ರವಾಹ ತಗ್ಗಿತು, ಇನ್ನುಳಿದಿರುವುದು ಸ್ವಚ್ಛತಾ ಕಾರ್ಯ

Last Updated 21 ಆಗಸ್ಟ್ 2018, 5:25 IST
ಅಕ್ಷರ ಗಾತ್ರ

ತಿರುವನಂತಪುರಂ: ಪ್ರವಾಹ ತಗ್ಗುತ್ತಿದ್ದಂತೆ ಕೇರಳದ ಜನರು ಸಹಜ ಸ್ಥಿತಿಯತ್ತ ಮರಳಲು ಪ್ರಯತ್ನಿಸುತ್ತಿದ್ದಾರೆ.ಮಳೆ ನೀರಿನಲ್ಲಿ ಕೊಚ್ಚಿ ಹೋದ ಮನೆ, ಆಸ್ತಿ, ಸಂಪತ್ತಿನ ನೋವು ಮರೆತು ಹೊಸತಾಗಿ ಬದುಕು ರೂಪಿಸುವ ಧಾವಂತ ಇಲ್ಲಿದೆ.ಕೇರಳವನ್ನು ಸುಸ್ಥಿತಿಗೆ ಮರಳಿಸಲು ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ.

ಈ ಮಹಾ ಪ್ರವಾಹದಿಂದಾಗಿ ಕೇರಳದಲ್ಲಿ 11,001 ಮನೆಗಳು ನಾಶವಾಗಿವೆ. ಇದರಲ್ಲಿ 699 ಸಂಪೂರ್ಣವಾಗಿ ಮತ್ತು 10,302 ಭಾಗಶಃವಾಗಿ ಹಾನಿಯಾಗಿವೆ. 26 ಲಕ್ಷ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು 2,80 ಕೃಷಿಕರ 45,988 ಹೆಕ್ಟರ್ ಕೃಷಿ ಭೂಮಿ. ಮನೆ ಮತ್ತು ಕೃಷಿ ಭೂಮಿಯ ನಷ್ಟ ಅಂದಾಜು ₹1100 ಕೋಟಿಯಷ್ಟಿದೆ. ಹಾನಿಗೊಳಗಾದ ರಸ್ತೆ ಮತ್ತು ಮೂಲಸೌಕರ್ಯಗಳ ಖರ್ಚು ವೆಚ್ಚ ಇನ್ನೂ ಜಾಸ್ತಿಯಾಗಲಿದೆ.

ಸ್ವಚ್ಛತೆಮತ್ತು ಮನೆಗಳನ್ನು ವಾಸಯೋಗ್ಯವನ್ನಾಗಿ ಮಾಡಲು 40,000 ಪೊಲೀಸರು ಕೈಜೋಡಿಸಲಿದ್ದಾರೆ. 60 ಸಾವಿರಕ್ಕಿಂತ ಹೆಚ್ಚು ಮಂದಿಯನ್ನು ರಕ್ಷಿಸಿ ರಸ್ತೆ ಸಂಚಾರ ಪುನರಾರಂಭ ಮಾಡಲು ವ್ಯವಸ್ಥೆ ಕಲ್ಪಿಸಿದ ನಂತರ ಪೊಲೀಸರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ರಾಜ್ಯದ ಪೊಲೀಸ್ ಅಧಿಕಾರಿ ಲೋಕನಾಥ್ ಬೆಹರಾ ಹೇಳಿದ್ದಾರೆ.

ಡಿಜಿಪಿಯವರ ನಿರ್ದೇಶನದ ಮೇರೆಗೆ ಆರನ್ಮುಳ ಪ್ರದೇಶದಲ್ಲಿ ವನಿತಾ ಪೊಲೀಸ್‍ಗಳು ಜತೆ ಸೇರಿ ಮನೆ ಸ್ವಚ್ಛ ಮಾಡುವ ಕಾಯಕ ಆರಂಭಿಸಿದ್ದಾರೆ. ಶುಚಿಗೊಳಿಸುವ ಕಾರ್ಯದಲ್ಲಿ ಸ್ವಯಂ ಸೇವಕರ ಸಹಾಯವನ್ನೂ ಸರ್ಕಾರ ಕೇಳಿದೆ.ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಅದನ್ನು ತಡೆಗಟ್ಟಲು 30 ದಿನಗಳ ಕಾಲ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲು ಆರೋಗ್ಯ ಇಲಾಖೆ ಸಜ್ಜಾಗಿದೆ.

ಕೇರಳದ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿ

ಸಹಾಯ ಮಾಡಲಿಚ್ಛಿಸುವವರು ಕೇರಳ ಮುಖ್ಯಮಂತ್ರಿಯವರ ನೆರೆ ಪರಿಹಾರ ನಿಧಿಗೆಹಣಕಳುಹಿಸಬಹುದು

Chief Minister's Distress Relief Fund

NO: 67319948232
Bank: State Bank of India
IFSC : SBIN0070028
SWIFT CODE : SBININBBT08

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT