ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂಗನ್ನೂರಿನ ಪ್ರವಾಹ ಪೀಡಿತ ಪ್ರದೇಶದಲ್ಲಿದ್ದಾರೆ 30,000 ಮಂದಿ

Last Updated 21 ಆಗಸ್ಟ್ 2018, 3:03 IST
ಅಕ್ಷರ ಗಾತ್ರ

ತಿರುವನಂತಪುರಂ: ಜಲಪ್ರಳಯದಲ್ಲಿ ಸಿಕ್ಕಿ ಬಿದ್ದಿರುವ ಜನರನ್ನು ದಡ ಸೇರಿಸುವ ರಕ್ಷಣಾ ಕಾರ್ಯಗಳು ಕೊನೆಯ ಹಂತದಲ್ಲಿದೆ. ಕುಟ್ಟನಾಡಿನಲ್ಲಿ ರಕ್ಷಣಾ ಕಾರ್ಯ ಕೊನೆಗೊಂಡಿದೆ ಎಂದು ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ. ಸಹಾಯ ಮಾಡಿ ಎಂದು ಕೇಳಿದ ಎಲ್ಲರಿಗೂ ಸಹಾಯ ಹಸ್ತ ಚಾಚಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ. ಆದರೆ ಚೆಂಗನ್ನೂರಿನಲ್ಲಿ 30,000 ಮಂದಿ ಪ್ರಳಯ ಪೀಡಿತ ಪ್ರದೇಶಗಳಲ್ಲಿದ್ದಾರೆ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.

ಆದರೆ ಇವರು ಯಾರೂ ಅಪಾಯದ ಪ್ರದೇಶಗಳಲ್ಲಿ ಇಲ್ಲ. ತಮ್ಮ ಮನೆ ಬಿಟ್ಟು ಹೊರಗೆ ಬರಲು ಒಪ್ಪದೇ ಇದ್ದ ಜನರಾಗಿದ್ದಾರೆ ಇವರು ಎಂದು ಪೊಲೀಸರು ಹೇಳಿದ್ದಾರೆ. ಸೋಮವಾರ ಇವರಿಗೆ ಊಟ. ನೀರು ನೀಡಲಾಗಿದೆ.

ಚೆಂಗನ್ನೂರಿನಲ್ಲಿರುವ ಪ್ರಧಾನ ಪರಿಹಾರ ಶಿಬಿರಗಳ ಸುರಕ್ಷತೆಯ ಜವಾಬ್ದಾರಿಯನ್ನು ಸಿಐಎಸ್‍ಎಫ್ ವಹಿಸಿಕೊಂಡಿದೆ.
ನೀರಿನ ಮಟ್ಟ ಕಡಿಮೆಯಾಗಿರುವ ಪುತ್ತನ್ ಕಾವ್, ಆರಾಟ್ಟುಪ್ಪುಳ, ಮಾಲಂಕರ ಪ್ರದೇಶಗಳಿಗೆ ಚೆಂಗನ್ನೂರಿನ ಶಿಬಿರಗಳಿಂದ ಜನರು ವಾಪಸ್ ಹೋಗುತ್ತಿದ್ದಾರೆ.

ಕುಟ್ಟನಾಡಿನ ಪ್ರವಾಹ ಪೀಡಿ ಪ್ರದೇಶಗಳಲ್ಲಿ 15 ಸಾವಿರದಷ್ಟು ಮಂದಿ ಇದ್ದಾರೆ, ಇದರಲ್ಲಿ 4 ಸಾವಿರ ಮಂದಿ ಎಡತ್ವಾ ಕಾಲೇಜಿನ ಪರಿಹಾರ ಶಿಬಿರದಲ್ಲಿದ್ದಾರೆ. ಇನ್ನು ಕೆಲವರು ಹೌಸ್ ಬೋಟ್‍ನಲ್ಲಿದ್ದಾರೆ.
ಪತ್ತನಂತಿಟ್ಟ ಜಿಲ್ಲೆಯ ಅಪ್ಪರ್ ಕುಟ್ಟನಾಡು ಪ್ರದೇಶದಲ್ಲಿ ಇನ್ನೂ ನೀರು ಇಳಿದಿಲ್ಲ.ನಿರಣಂ, ಕಡಪ್ರಾ, ಪೆರಿಂಗರ ಪಂಚಾಯತಿನಲ್ಲಿ ಮನೆಗಳು ನೀರಲ್ಲಿ ಮುಳುಗಿವೆ, ಇನ್ನು ಕೆಲವೇ ಕೆಲವು ಜನರನ್ನು ರಕ್ಷಿಸಲು ಬಾಕಿ ಇದೆ.ಅವರನ್ನು ಇಂದು ರಕ್ಷಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದನ್ನ ಸರಿಮಾಡಲು ಇನ್ನೂ ಎರಡು ವಾರ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT