ತಿರುವನಂತಪುರ: ಆರ್ಎಸ್ಎಸ್ ಕಾರ್ಯಕರ್ತ, ಸಾಫ್ಟ್ವೇರ್ ಎಂಜಿನಿಯರ್ ಆನಂದು ಅಜಿ (26) ಆತ್ಮಹತ್ಯೆಗೆ ಸಂಬಂಧಿಸಿದಂತೆ ಕಂಜಿರಪ್ಪಳ್ಳಿ ಮೂಲದ ನಿಧೀಶ್ ಮುರಳೀಧರನ್ ವಿರುದ್ಧ ಅಸ್ವಾಭಾವಿಕ ಲೈಂಗಿಕ ಅಪರಾಧ (ಐಪಿಸಿ ಸೆಕ್ಷನ್ 377) ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಪ್ರಕರಣವನ್ನು ತಂಬಾನೂರ್ ಪೊಲೀಸರು ದಾಖಲಿಸಿದ್ದು, ಅದನ್ನು ಕೊಟ್ಟಾಯಂ ಜಿಲ್ಲೆಯ ಪೊನ್ಕುನಂ ಠಾಣೆಗೆ ವರ್ಗಾಯಿಸಿದ್ದಾರೆ. ಈ ಕುರಿತು ಎಫ್ಐಆರ್ ಮರು ದಾಖಲಿಸಿ, ಶೀಘ್ರದಲ್ಲಿಯೇ ತನಿಖೆ ಪ್ರಾರಂಭಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೊಟ್ಟಾಯಂನ ತಂಬಲಕ್ಕಾಡ್ ನಿವಾಸಿ ಆನಂದು ಅಜಿ ಮೃತದೇಹವು, ಅ. 9ರಂದು ತಿರುವನಂತಪುರದ ಸಮೀಪದ ತಂಬಾನೂರ್ನ ಲಾಡ್ಜ್ನಲ್ಲಿ ಪತ್ತೆಯಾಗಿತ್ತು. ಅದರ ಬೆನ್ನಲ್ಲೇ, ಅ.10ರಂದು ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ, ‘ಬಾಲ್ಯದಲ್ಲಿ ಆರ್ಎಸ್ಎಸ್ನ ಕ್ಯಾಂಪ್ನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ. ತಮ್ಮ ಕುಟುಂಬಕ್ಕೆ ಪರಿಚಿತರಾದ ನಿಧೀಶ್ ಮುರಳೀಧರನ್ (ಎನ್.ಎಂ) ಎಂಬವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿದ ಪೋಸ್ಟ್ ಪ್ರಕಟವಾಗಿತ್ತು.

ಈ ಪೋಸ್ಟ್ ಅನ್ನು ಸಾವಿನ ನಂತರ ಪ್ರಕಟಗೊಳ್ಳುವ ಹಾಗೆ ‘ಸಮಯ ನಿಗದಿ’ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
.ಕೇರಳದಲ್ಲಿ RSS ಕಾರ್ಯಕರ್ತ ಆತ್ಮಹತ್ಯೆ: ಡಿವೈಎಫ್ಐ, ಕಾಂಗ್ರೆಸ್ ಪ್ರತಿಭಟನೆ.RSSನಿಂದ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಕೇರಳ ಟೆಕಿ ಆತ್ಮಹತ್ಯೆ: ರಾಜಕೀಯ ತಿರುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.