ತಿರುವನಂತಪುರ: ಕೇರಳದ ಕೊಟ್ಟಾಯಂನ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಟ್ಟಡವೊಂದು ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದ ಕುಟುಂಬಸ್ಥರನ್ನು ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಮೃತ ಮಹಿಳೆಯ (ಬಿಂದು) ಪತಿ, ತಾಯಿ ಮತ್ತು ಮಕ್ಕಳೊಂದಿಗೆ ವೀಣಾ ಜಾರ್ಜ್ ಮಾತುಕತೆ ನಡೆಸಿದರು. ಸರ್ಕಾರದಿಂದ ಎಲ್ಲಾ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
.PSI ಎಂದು ಬರೋಬ್ಬರಿ 2 ವರ್ಷ ವಂಚಿಸಿದ್ದ ರಾಜಸ್ಥಾನದ ಮೋನಾ ಅಲಿಯಾಸ್ ‘ಮೂಲಿ’ ಬಂಧನ.ಸತತ 53 ದಿನ ಕಾರ್ಯಾಚರಣೆ ನಡೆಸಿ ನರಭಕ್ಷಕ ಹುಲಿ ಸೆರೆ ಹಿಡಿದ ಕೇರಳ ಅರಣ್ಯ ಇಲಾಖೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಂದು ಅವರ ದುರಂತ ಸಾವು ಹೃದಯವಿದ್ರಾವಕ ಮತ್ತು ಅತ್ಯಂತ ನೋವಿನಿಂದ ಕೂಡಿದೆ. ಸರ್ಕಾರವು ಅವರೊಂದಿಗೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈಗಾಗಲೇ ಈ ಬಗ್ಗೆ ಮಾತನಾಡಿದ್ದಾರೆ. ಸಚಿವ ಸಂಪುಟದ ನಿರ್ಧಾರಗಳ ಆಧಾರದ ಮೇಲೆ ಕುಟುಂಬಕ್ಕೆ ಪರಿಹಾರ ಕ್ರಮಗಳನ್ನು ಘೋಷಿಸಲಾಗುವುದು ಎಂದು ಜಾರ್ಜ್ ತಿಳಿಸಿದ್ದಾರೆ.

ಕೊಟ್ಟಾಯಂನ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಟ್ಟಡವೊಂದು ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿತ್ತು. ಘಟನೆಯಲ್ಲಿ ಬಾಲಕಿ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು.
.OBC ಸಲಹಾ ಮಂಡಳಿ ಸದಸ್ಯರಲ್ಲಿ ಸಿದ್ದರಾಮಯ್ಯ ಕೂಡಾ ಒಬ್ಬರು: CM ಸಚಿವಾಲಯ ಸ್ಪಷ್ಟನೆ.ತಮಿಳು ಸಿನಿಮಾದಲ್ಲಿ ನಟಿಸಲಿರುವ ಮಾಜಿ ಕ್ರಿಕೆಟಿಗ ಸುರೇಶ್ ರೈನಾ..ಇಲ್ಲಿದೆ ಮಾಹಿತಿ.
ಮೃತ ಮಹಿಳೆಯನ್ನು ತಳಯೋಲಾಪರಂಬುವಿನ ಬಿಂದು (52) ಎಂದು ಗುರುತಿಸಲಾಗಿತ್ತು. ಅಲೀನಾ (11), ಅಮಲ್ ಪ್ರದೀಪ್ (20) ಜಿನು ಸಾಜಿ (38) ಗಾಯಾಳುಗಳು. ಸದ್ಯ ಗಾಯಾಳುಗಳು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಟ್ಟಡ (ವಾರ್ಡುಗಳಿಗೆ ಹೊಂದಿಕೊಂಡಿದ್ದ ಟಾಯ್ಲೆಟ್ ಕಾಂಪ್ಲೆಕ್ಸ್) ಕುಸಿತಕ್ಕೆ ಕಾರಣ ತಿಳಿದು ಬಂದಿಲ್ಲ. ಆದರೆ, ಕುಸಿದ ಕಟ್ಟಡ ಹಲವು ದಶಕಗಳಷ್ಟು ಹಳೆಯದ್ದು ಎಂದು ಪೊಲೀಸರು ತಿಳಿಸಿದ್ದಾರೆ.
.ಸದ್ಯದಲ್ಲೇ CM ಸಿದ್ದರಾಮಯ್ಯ ದೆಹಲಿಗೆ ವರ್ಗ: ಬಿ.ವೈ.ವಿಜಯೇಂದ್ರ.Dhurandhar | ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.