ನವದೆಹಲಿ: ಪೂರ್ವ ಲಡಾಖ್ನಲ್ಲಿ ಸೇನಾ ಸಾಮರ್ಥ್ಯವನ್ನು ವಿಸ್ತರಿಸಲು ರಕ್ಷಣಾ ಸಚಿವಾಲಯ ಯೋಜಿಸಿದೆ. ಕ್ಷಿಪಣಿ ಸಂಗ್ರಹ ಕೇಂದ್ರಗಳು, ವಾಯುನೆಲೆ ಹಾಗೂ ಪಡೆಗಳಿಗೆ ವಸತಿ ಕೇಂದ್ರವನ್ನು ಸ್ಥಾಪಿಸಲು ಸಚಿವಾಲಯ ಸಜ್ಜಾಗಿದೆ.

ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆ ನಡುವೇ ಭಾರತ ಈ ಕ್ರಮ ಕೈಗೊಂಡಿದೆ.

ಅಲ್ಲದೇ ಕಾರಾಕೋರಂ ಸಮೀಪವಿರುವ ಭಾರತದ ಅತಿ ಎತ್ತರದ ಭೂಪ್ರದೇಶ ದೌಲತ್ ಬೇಗ್ ಓಲ್ಡಿಗೆ ರಸ್ತೆ ಸಂಪರ್ಕವನ್ನು ಸುಧಾರಿಸಲಾಗುವುದು. ಯುದ್ಧ ಸಾಮಗ್ರಿಗಳ ಶೇಖರಣೆಗೆ ವ್ಯವಸ್ಥೆ ಮಾಡಲಾಗುವುದು. ಹೆಲಿಕಾಪ್ಟರ್ಗಳು ಹಾಗೂ ಮಾನವರಹಿತ ವೈಮಾನಿಕ ವಾಹನಗಳಿಗೆ ವಾಯುನೆಲೆ ರಚಿಸಲಾಗುವುದು.

ಈ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಲಡಾಖ್ನಲ್ಲಿ ಒಟ್ಟು 300 ಹೆಕ್ಟೇರ್ಗಿಂತ ಹೆಚ್ಚು ಭೂ ಪ್ರದೇಶದ ಅಗತ್ಯವಿದೆ.

ಲಡಾಖ್ನಲ್ಲಿ 25 ಸೇನಾ ಮೂಲಸೌಕರ್ಯ ಕೇಂದ್ರ ಸ್ಥಾಪಿಸುವ ಯೋಜನೆಯಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಇತ್ತೀಚೆಗೆ ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.