ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜ್ಬುಲ್ಲಾ ಹಿಂದಿಗಿಂತ ಪ್ರಬಲವಾಗಿದೆ: ಎಚ್ಚರಿಕೆ ನೀಡಿದ ಹಶೇಮ್‌ ಸಫೀದ್ದೀನ್‌

Published 18 ಅಕ್ಟೋಬರ್ 2023, 16:15 IST
Last Updated 18 ಅಕ್ಟೋಬರ್ 2023, 16:15 IST
ಅಕ್ಷರ ಗಾತ್ರ

ಬೈರೂತ್‌: ‘ಹಿಜ್ಬುಲ್ಲಾ ಈಗ ಹಿಂದಿಗಿಂತ ಸಾವಿರ ಪಟ್ಟು ಬಲಶಾಲಿಯಾಗಿದೆ’ ಎಂದು ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರ ಪಡೆಯ ಅಧಿಕಾರಿ ಹಶೇಮ್‌ ಸಫೀದ್ದೀನ್‌ ಬುಧವಾರ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ‘ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಯುರೋಪಿಯನ್ನರು ಇನ್ನು ಮುಂದೆ ಜಾಗರೂಕತೆಯಿಂದ ಇರಬೇಕು. ನಮ್ಮ ಪ್ರತಿರೋಧದ ವಿಚಾರವಾಗಿ ನೀವು ಮೂಗುತೂರಿಸಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ’ ಎಂದಿದ್ದಾರೆ.

ಹಮಾಸ್‌ ಬಂಡುಕೋರರಿಗೆ ಬೆಂಬಲ ಸೂಚಿಸಿರುವ ಹಿಜ್ಬುಲ್ಲಾ ಪಡೆಯು ಲೆಬನಾನ್‌ ಗಡಿಯಲ್ಲಿ ಇಸ್ರೇಲ್‌ ಸೇನೆ ಜೊತೆ ಸಂಘರ್ಷಕ್ಕಿಳಿದಿದೆ. ಲೆಬನಾನ್‌ ಮತ್ತು ಹಮಾಸ್‌ಗೆ ಬೆಂಬಲ ನೀಡದಂತೆ ಅಮೆರಿಕವು ಇರಾನ್‌ಗೆ ಎಚ್ಚರಿಕೆ ನೀಡಿತ್ತು. ಈ ಬೆನ್ನಲ್ಲೇ ಹಶೇಮ್‌ ಹೀಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT