ಭುವನೇಶ್ವರ: ಒಡಿಶಾದಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಆರು ಮಹಿಳೆಯರು ಸೇರಿ ಒಂಬತ್ತು ಮಂದಿ ಮೃತಪಟ್ಟಿದ್ದು, ಕೆಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿ ಭಾರಿ ಮಳೆಯಾಗಿದ್ದು, ಕೊರಾಪುಟ್ ಜಿಲ್ಲೆಯಲ್ಲಿ ಮೂವರು, ಜಾಜ್ಪುರ ಮತ್ತು ಗಂಜಾಂ ಜಿಲ್ಲೆಗಳಲ್ಲಿ ತಲಾ ಇಬ್ಬರು ಧೆಂಕನಲ್ ಮತ್ತು ಗಜಪತಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಜಾಜ್ಪುರ ಜಿಲ್ಲೆಯಲ್ಲಿ, ಧರ್ಮಸಾಲಾ ಪ್ರದೇಶದಲ್ಲಿ ಸಿಡಿಲು ಬಡಿದು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಗಂಜಾಂ ಜಿಲ್ಲೆಯ ಕಬಿಸೂರ್ಯನಗರದಲ್ಲಿ ಸಿಡಿಲು ಬಡಿದು 7ನೇ ತರಗತಿ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
.ಟರ್ಕಿ ಸೇಬಿಗೆ ಬಹಿಷ್ಕಾರ ಬಿಸಿ: ಕಾಶ್ಮೀರ ಸೇಬು ಉದ್ಯಮಕ್ಕೆ ಮೂಡಿತು ಭರವಸೆಯ ಬೆಳಕು.ಕಣಿವೆ ರಾಜ್ಯದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ: ಭದ್ರತಾ ಪಡೆಗಳ ಶೋಧ .
ಬೆಳಗುಂತ ಪ್ರದೇಶದಲ್ಲಿ ಮಾವಿನ ಹಣ್ಣುಗಳನ್ನು ಸಂಗ್ರಹಿಸುತ್ತಿದ್ದ ಮಹಿಳೆಯೊಬ್ಬರಿಗೆ ಸಿಡಿಲು ಬಡಿದು ಮೃತಪಟ್ಟರೆ, ಧೆಂಕನಲ್ನ ಕುಸುಮುಂಡಿಯಾ ಗ್ರಾಮದಲ್ಲಿ ಸಿಡಿಲು ಬಡಿದು ಮತ್ತೋರ್ವ ಮಹಿಳೆ ಸಾವಿಗೀಡಾಗಿದ್ದಾರೆ. ಗಜಪತಿ ಜಿಲ್ಲೆಯಲ್ಲಿ ಇಟ್ಟಿಗೆಗಳನ್ನು ಸಾಗಿಸುತ್ತಿದ್ದ ವೇಳೆ ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಈ ಸಂಬಂಧ ಅಸಹಜ ಸಾವು ಪ್ರಕರಣದಡಿ ದೂರು ದಾಖಲಿಸಿಕೊಂಡು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರಾಪುಟ್, ಕಟಕ್, ಖುರ್ದಾ, ನಯಾಗಢ, ಜಾಜ್ಪುರ, ಬಾಲಸೋರ್ ಮತ್ತು ಗಂಜಾಂ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಶುಕ್ರವಾರ ಭಾರಿ ಮಳೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ವಿಮಾನದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಅಚ್ಚರಿ ನೀಡಿದ ಏರ್ ಇಂಡಿಯಾ ಸಿಬ್ಬಂದಿ.ನನ್ನದೇ ಹೆಸರಿನ ಸ್ಟಾಂಡ್ ಇರುವ ವಾಂಖೆಡೆಯಲ್ಲಿ ಆಡುವುದೇ ವಿಶೇಷ: ರೋಹಿತ್ ಶರ್ಮಾ.ಭಾರತ ನಮ್ಮ ವಾಯುನೆಲೆ ಮೇಲೆ ದಾಳಿ ಮಾಡಿರುವುದು ನಿಜ: ಪಾಕ್ ಪ್ರಧಾನಿ ಷರೀಫ್.ವಾಣಿಜ್ಯ ತೆರಿಗೆ ಸಂಗ್ರಹ ಗುರಿ ಮುಟ್ಟಲೇಬೇಕು: ಅಧಿಕಾರಿಗಳ ಕಿವಿ ಹಿಂಡಿದ ಸಿಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.