ಬೊಟಾಡ್/ ಗುಜರಾತ್: ಬೊಟಾಡ್ ಜಿಲ್ಲೆಯ ಇಟಾರಿಯಾ ಹಳ್ಳಿಯೊಂದರಲ್ಲಿ ತೆರೆದ ಬಾವಿಗೆ ಬಿದ್ದು, ಸಿಂಹಿಣಿಯೊಂದು (ಹೆಣ್ಣು ಸಿಂಹ) ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
‘ಈ ಘಟನೆಯು ಮಂಗಳವಾರ ರಾತ್ರಿ ಸಂಭವಿಸಿದ್ದು, ಬುಧವಾರ ಬೆಳಿಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ’ ಎಂದು ವಲಯ ಅರಣ್ಯಾಧಿಕಾರಿ ಐಎಸ್ ಪ್ರಜಾಪತಿ ತಿಳಿಸಿದ್ದಾರೆ.
‘ಸಿಂಹಿಣಿಯ ಮೃತದೇಹವನ್ನು ಬಾವಿಯಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ’ ಎಂದು ಅವರು ತಿಳಿಸಿದರು.