ನವದೆಹಲಿ: ಶಸ್ತ್ರಚಿಕಿತ್ಸೆಯ ನೇರಪ್ರಸಾರವನ್ನು ಆಸ್ಪತ್ರೆ ಅಥವಾ ಉತ್ಪನ್ನದ ಬ್ರ್ಯಾಂಡ್ ಉತ್ತೇಜನಕ್ಕಾಗಿ ವೈದ್ಯರು ಬಳಕೆ ಮಾಡಬಾರದು, ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್ಎಂಸಿ) ಸೂಚಿಸಿದೆ.

ರೋಗಿಯ ಶಸ್ತ್ರಚಿಕಿತ್ಸೆಯ ನೇರಪ್ರಸಾರಕ್ಕೂ ಮುನ್ನ ಅವರ ಕುಟುಂಬದವರ ಒಪ್ಪಿಗೆ ಪಡೆಯುವುದು ಅಗತ್ಯ ಎಂದೂ ಎನ್ಎಂಸಿ ತಿಳಿಸಿದೆ.

ಈ ಕುರಿತ ವಿವರವಾದ ಮಾರ್ಗಸೂಚಿಯನ್ನು ಎನ್ಎಂಸಿ ಈ ವಾರ ಬಿಡುಗಡೆ ಮಾಡಿದೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಬಳಕೆಯಾಗುವ ಸಾಧನಗಳಲ್ಲಿ ಚಿಕಿತ್ಸಕರು ಹಣಕಾಸು ಅಥವಾ ವಾಣಿಜ್ಯ ಹಿತಾಸಕ್ತಿ ಹೊಂದಿರಬಾರದು ಎಂದು ಆಯೋಗ ತಿಳಿಸಿದೆ.

ಶಸ್ತ್ರಚಿಕಿತ್ಸಕರು ತಮ್ಮ ಕಾರ್ಯದ ವೈಭವೀಕರಣ ಮಾಡಬಾರದು. ಶಸ್ತ್ರಚಿಕಿತ್ಸೆ ಮತ್ತು ರೋಗಿಯ ಕಾಳಜಿಯತ್ತ ಅವರ ಲಕ್ಷ್ಯ ಇರಬೇಕು ಎಂದು ನಿಯಮಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.