ತಿರುವನಂತಪುರ: ಕೋವಿಡ್ ಪ್ರಕರಣಗಳು ವಿಪರೀತಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೆರೆಯ ಕೇರಳ ಸರ್ಕಾರವುಲಾಕ್ಡೌನ್ ಹೇರಿಕೆಗೆ ನಿರ್ಧರಿಸಿದೆ.
ಮೇ 8ರ ಬೆಳಗ್ಗೆ 6 ಗಂಟೆಯಿಂದ ಮೇ16ರವರೆಗೆ ಕೇರಳ ರಾಜ್ಯದಲ್ಲಿ ಲಾಕ್ಡೌನ್ ಜಾರಿ ಮಾಡುತ್ತಿರುವುದಾಗಿ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ ಎಂದುಎಎನ್ಐ ತಿಳಿಸಿದೆ.
ಬುಧವಾರ ಕೇರಳ 41,953 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದು ಇದುವರೆಗಿನ ದೈನಂದಿನ ದಾಖಲೆಯಾಗಿದೆ.
ಲಾಕ್ಡೌನ್ ವೇಳೆ ಯಾವುದಕ್ಕೆಲ್ಲ ವಿನಾಯತಿ ಇರಲಿದೆ ಎಂಬುದು ಮಾರ್ಗಸೂಚಿಯಲ್ಲಿ ತಿಳಿದು ಬರಲಿದೆ.
ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ..
Lockdown to be imposed in the state from 6 am on May 8 to May 16, in wake of the surge in COVID-19 cases in the second wave: Kerala CM Pinarayi Vijayan