ಮುಂಬೈ: ಮುಂಬರುವ ಲೋಕಸಭಾ ಚುನಾವಣೆ ವೇಳೆ ಮಹಾರಾಷ್ಟ್ರದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಪವಾರ್ ಕುಟುಂಬಸ್ಥರೇ ಪರಸ್ಪರ ಎದುರಾಳಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ಶರದ್ ಪವಾರ್ ನೇತೃತ್ವದಲ್ಲಿ ಪವಾರ್ ಕುಟುಂಬಸ್ಥರೇ ಬಾರಾಮತಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದರು. ಆದರೆ, ಇದೇ ಮೊದಲ ಬಾರಿಗೆ ಪವಾರ್ ಕುಟುಂಬಸ್ಥರೇ ಆಗಿರುವ ಶರಾದ್ ಪವಾರ್ ಅವರ ಮಗಳು ಸುಪ್ರಿಯಾ ಸುಳೆ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಪರಸ್ಪರ ಎದುರಾಳಿಗಳಾಗಲಿದ್ದಾರೆ.

ಸುಪ್ರಿಯಾ ಅವರು ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಅಭ್ಯರ್ಥಿಯಾಗಲಿದ್ದು, ಆಡಳಿತಾರೂಢ ಮಹಾ ಯುತಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುನೇತ್ರಾ ಪವಾರ್ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

2023ರ ಜೂನ್–ಜುಲೈನಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿಯನ್ನು ತೊರೆದ ಅಜಿತ್ ಪವಾರ್ ಅವರು ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರಿದ ಬಳಿಕ ಬಾರಾಮತಿಯಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ ಎನ್ನಲಾಗಿದೆ.

ಶನಿವಾರ ಸಂಜೆಯಷ್ಟೇ ಎಂವಿಎ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದ ಶರದ್ ಪವಾರ್, ಕಳೆದ ಮೂರು ಅವಧಿಯಿಂದಲೂ ಬಾರಾಮತಿಯನ್ನು ಪ್ರತಿನಿಧಿಸುತ್ತಿರುವ ಸುಪ್ರಿಯಾ ಸುಳೆ ಅವರೇ ಮುಂದಿನ ಅವಧಿಗೂ ಅಭ್ಯರ್ಥಿಯಾಗಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೆ, ಅತ್ಯುತ್ತಮ ಸಂಸದೀಯ ಪಟು ಆಗಿರುವ ಅವರನ್ನು ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

ಇದರ ಬೆನ್ನಲ್ಲೇ, ಭಾನುವಾರ ಅಜಿತ್ ಪವಾರ್ ಅವರ ಆಪ್ತ ಹಾಗೂ ಎನ್‌ಸಿ ಅಧ್ಯಕ್ಷ ಸುನೀಲ್ ತಟಕರೆ, ‘ಸುನೇತ್ರಾ ಪವಾರ್ ಅವರು ಬಾರಾಮತಿಯಿಂದ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ’ ಎಂದು ಹೇಳಿದ್ದಾರೆ.

ಅಲ್ಲದೆ, ಬಾರಾಮತಿಯಲ್ಲಿ ಸುನೇತ್ರಾ ಪವಾರ್ ಮತ್ತು ಸುಪ್ರಿಯಾ ಸುಳೆ ಅವರು ಸರಣಿ ಸಭೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.