ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಣೆಯಾದವರ ದೂರುಗಳಲ್ಲಿ ಲವ್‌ ಜಿಹಾದ್‌ ಪ್ರಕರಣಗಳೇ ಹೆಚ್ಚು: ದೇವೇಂದ್ರ ಫಡಣವೀಸ್‌

Published 3 ಜೂನ್ 2023, 20:41 IST
Last Updated 3 ಜೂನ್ 2023, 20:41 IST
ಅಕ್ಷರ ಗಾತ್ರ

ಮುಂಬೈ: ‘ರಾಜ್ಯದಲ್ಲಿ ಕಾಣೆಯಾದವರ ದೂರುಗಳ ಬಗ್ಗೆ ತನಿಖೆ ನಡೆಸುವ ಸಂದರ್ಭದಲ್ಲಿ ಲವ್‌ ಜಿಹಾದ್‌ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿವೆ’ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಗೃಹ ಖಾತೆಯ ಜವಾಬ್ದಾರಿಯನ್ನು ಹೊಂದಿರುವ ಫಡಣವೀಸ್ ಅವರು, ‘ಈ ರೀತಿ ಪತ್ತೆಯಾದ ಲವ್‌ ಜಿಹಾದ್‌ ಪ್ರಕರಣಗಳು ಶೇ 90ರಿಂದ 95ರಷ್ಟಿವೆ. ಮಹಿಳೆಯರನ್ನು ದಾರಿತಪ್ಪಿಸಲು ಕೆಲವರು ಸುಳ್ಳು ಭರವಸೆ ನೀಡಿದ ಹಾಗೂ ಸುಳ್ಳು ಗುರುತು ನೀಡಿದ ಘಟನೆಗಳೂ ತನಿಖೆ ವೇಳೆ ಪತ್ತೆಯಾಗಿವೆ’ ಎಂದರು.

‘ಲವ್‌ ಜಿಹಾದ್‌ ಅನ್ನು ತಡೆಯಲು ಕಾನೂನು ರೂಪಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ನಾನು ಈ ಹಿಂದೆ ಹೇಳಿದ್ದೆ. ಇದಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಹಲವು ಕಾನೂನುಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT