ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಡ್ರಗ್ಸ್, ಮದ್ಯ, ನಗದು ಸೇರಿ ₹17 ಕೋಟಿ ಮೌಲ್ಯದ ವಸ್ತು ವಶ

Published 18 ಮಾರ್ಚ್ 2024, 15:41 IST
Last Updated 18 ಮಾರ್ಚ್ 2024, 15:41 IST
ಅಕ್ಷರ ಗಾತ್ರ

ಜೈಪುರ: ಲೋಕಸಭಾ ಚುನಾವಣೆ ಘೊಷಣೆಯಾದ ಬೆನ್ನಲ್ಲೇ ಜಾರಿಗೆ ಬಂದಿರುವ ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಮಾದಕದ್ರವ್ಯ, ಮದ್ಯ, ಬೆಲೆಬಾಳುವ ಲೋಹ ಹಾಗೂ ನಗದು ಸೇರಿ ಒಟ್ಟು ₹17 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಜಸ್ಥಾನದ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆ ಘೋಷಣೆಯಾದ ದಿನದಿಂದಲೇ ಜಾರಿಗೆ ಬಂದ ಮಾದರಿ ನೀತಿ ಸಂಹಿತೆ ಅಡಿಯಲ್ಲಿ ಮಾರ್ಚ್ 16ರಿಂದ ಇಷ್ಟು ದೊಡ್ಡ ಮೊತ್ತದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯ ಪೊಲೀಸ್, ಅಬಕಾರಿ ಇಲಾಖೆ, ನಾರ್ಕೊಟಿಕ್ಸ್‌ ಇಲಾಖೆ ಮತ್ತು ಆದಾಯ ತರಿಗೆ ಇಲಾಖೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

‘ಮಾರ್ಚ್‌ ತಿಂಗಳ ಆರಂಭದಿಂದ ಇಲ್ಲಿಯವರೆಗೆ ಸುಮಾರು ₹115 ಕೋಟಿ ಮೊತ್ತದ ಮಾದಕದ್ರವ್ಯ, ಮದ್ಯ, ಬೆಲೆಬಾಳುವ ಲೋಹ ಮತ್ತು ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ರಾಜಸ್ಥಾನ ಮುಖ್ಯ ಚುನಾವಣಾಧಿಕಾರಿ ಪ್ರವೀಣ ಗುಪ್ತಾ ತಿಳಿಸಿದ್ದಾರೆ.

ಇದರಲ್ಲಿ ₹2.41 ಕೋಟಿಯಷ್ಟು ನಗದು, ₹51.56 ಕೋಟಿ ಮಾದಕ ದ್ರವ್ಯ, ₹6.71 ಕೋಟಿ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ. ಉಳಿದವುಗಳಲ್ಲಿ ಬಂಗಾರ ಹಾಗೂ ಇತರ ಬೆಲೆಬಾಳುವ ವಸ್ತುಗಳು ಸೇರಿವೆ. ಇದರಲ್ಲಿ ಜೋಧಪುರದಲ್ಲೇ ಅತ್ಯಧಿಕ ₹18.70 ಕೋಟಿ ಮೊತ್ತದ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.

ರಾಜಸ್ಥಾನದ 25 ಲೋಕಸಭಾ ಕ್ಷೇತ್ರಗಳಿಗೆ ಏ. 19 ಹಾಗೂ ಏ. 26ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT