ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯಪ್ರದೇಶ: 2 ಗಂಟೆಗಳ ಕಾಲ ಕರ್ಫ್ಯೂ ಸ್ಥಗಿತ

Last Updated 14 ಏಪ್ರಿಲ್ 2022, 11:08 IST
ಅಕ್ಷರ ಗಾತ್ರ

ಖರ್ಗೋನ್‌, ಮಧ್ಯಪ್ರದೇಶ: ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ಗುರುವಾರ ಬೆಳಿಗ್ಗೆ 2 ಗಂಟೆಗಳ ಕಾಲ ಸಡಿಲಗೊಳಿಸಲಾಗಿತ್ತು. ಅತ್ಯಗತ್ಯ ವಸ್ತುಗಳನ್ನು ಕೊಳ್ಳಲು ಕೇವಲ ಮಹಿಳೆಯರಿಗೆ ಮಾತ್ರ ಅನುವು ಮಾಡಿಕೊಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಖರ್ಗೋನ್‌ ಜಿಲ್ಲಾಡಳಿತವು ನಾಲ್ಕು ದಿನಗಳ ನಂತರ ಅಲ್ಲಿ ವಿಧಿಸಿದ್ದ ಕರ್ಫ್ಯೂವನ್ನು ಇದೇ ಮೊದಲ ಬಾರಿಗೆ ಸಡಿಲಗೊಳಿಸಿತ್ತು.‌ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಅನುಗ್ರಹ. ಪಿ ಅವರು, ‘ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದರು.

ರಾಮನವಮಿಯ ಆಚರಣೆಯ ವೇಳೆ ಖರ್ಗೋನ್‌ನಲ್ಲಿ ಗಲಭೆ ಉಂಟಾಗಿದ್ದರಿಂದ ಕರ್ಫ್ಯೂವನ್ನು ವಿಧಿಸಲಾಗಿತ್ತು. ‘ಗಲಭೆ ಪ್ರಕರಣಕ್ಕೆ 121 ಆರೋಪಿಗಳನ್ನು ಬಂಧಿಸಿದ್ದು, ಅವರಲ್ಲಿ 89 ಆರೋಪಿಗಳನ್ನು ಜೈಲಿಗೆ ಕಳಿಸಲಾಗಿದೆ‘ ಎಂದು ಇಂಧೋರ್‌ ಗ್ರಾಮೀಣ ವಲಯದ ಪೊಲೀಸ್‌ ಮಹಾನಿರ್ದೇಶಕ ರಾಕೇಶ್ ಗುಪ್ತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT