ಭೋಪಾಲ್: ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಜನರನ್ನು ಉತ್ತೇಜಿಸುವುದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ‘ಹತ್ತು ಅತಿಥಿಗಳ ಸಮ್ಮುಖದಲ್ಲಿ ಮದುವೆಯಾಗುವ ಪ್ರತಿ ನವ ದಂಪತಿಗೆ ತಮ್ಮ ಮನೆಗೆ ಆಹ್ವಾನಿಸಿ, ರುಚಿಕರ ಭೋಜನ ಕೂಟ ಏರ್ಪಡಿಸುವುದಾಗಿ‘ ಪ್ರಕಟಿಸಿದ್ದಾರೆ.

ಮಧ್ಯಪ್ರದೇಶದ ಭಿಂದ್ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಸಿಂಗ್ ಇಂಥ ದ್ದೊಂದು ಹೊಸ ಆಲೋಚನೆಯನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ. 10 ಅಥವಾ ಅದಕ್ಕಿಂತ ಕಡಿಮೆ ಅತಿಥಿಗಳ ಸಮ್ಮುಖದಲ್ಲಿ ವಿವಾಹವಾಗುವ ವಧು-ವರರಿಗೆ ಈ ಆತಿಥ್ಯ ನೀಡುವುದಾಗಿ ಮನೋಜ್ ಕುಮಾರ್ ಸೋಮವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ವಾರದ ಹಿಂದೆ ಬಿಂಧ್ ಜಿಲ್ಲೆಯ ಕುರ್ತಾರ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಜನರು ಮಾಸ್ಕ್ ಧರಿಸಿದೇ, ವ್ಯಕ್ತಿಗತ ಅಂತರ ಕಾಪಾಡದೇ ಮನಬಂದಂತೆ ನೃತ್ಯ ಮಾಡುತ್ತಿದ್ದರು. ಇದನ್ನು ಗಮನಿಸಿದ ಮನೋಜ್ ಅವರು, ಇಂಥ ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಲು ತೀರ್ಮಾನಿಸಿ, ಈ ಹೊಸ ಯೋಜನೆ ಪ್ರಕಟಿಸಿದರು.

‘ರುಚಿಕರವಾದ ಭೋಜನ ಪಾರ್ಟಿ ಜತೆಗೆ, ವಿವಾಹ ಮಹೋತ್ಸವದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಿದ ದಂಪತಿಗೆ ನೆನಪಿನ ಕಾಣಿಕೆ ನೀಡಿ, ಸರ್ಕಾರಿ ವಾಹನದಲ್ಲಿ ಮನೆಗೆ ತಲುಪಿಸುವುದಾಗಿ‘ ಪ್ರಕಟಿಸಿದರು.

ದೆಹಲಿ: ಆಮ್ಲಜನಕದ ನೆರವಿನ 500 ಹಾಸಿಗೆಗಳ ಸಾಮರ್ಥ್ಯದ ಕೋವಿಡ್ ಕೇಂದ್ರ ಆರಂಭ

‘ಈ ಪ್ರಕಟಣೆ ನೀಡಿ ಎರಡು ದಿನಗಳಾಗಿವೆ. ಇಲ್ಲಿವರೆಗೂ ಯಾರೂ ನನ್ನ ಭೋಜನ ಸತ್ಕಾರದ ಆಹ್ವಾನವನ್ನು ಸ್ವೀಕರಿಸಲು ಬಂದಿಲ್ಲ‘ ಎಂದು ಎಸ್‌ಪಿ ಮನೋಜ್ ಕುಮಾರ್ ಹೇಳಿದರು.

ಮಹಾರಾಷ್ಟ್ರಕ್ಕೆ ತಲುಪಿದ ಎರಡನೇ ‘ಆಕ್ಸಿಜನ್ ಎಕ್ಸ್ಪ್ರೆಸ್’

ಏಪ್ರಿಲ್ 30ರಂದು ಎರಡು ಜೋಡಿಗಳು ವಿವಾಹವಾಗುತ್ತಿದ್ದಾರೆ. ನಾನು ಹೇಳಿದ ನಂತರ ಅವರು ಅತಿಥಿಗಳ ಸಂಖ್ಯೆಯನ್ನು 10ಕ್ಕೆ ಮಿತಿಗೊಳಿಸಲು ಯೋಚಿಸಿದ್ದಾರೆ. ಅವರು ಹಾಗೆ ಮಾಡಿದ್ದೇ ಆದರೆ, ನನ್ನ ಕುಟುಂಬದೊಂದಿಗೆ, ನನ್ನ ಮನೆಯಲ್ಲೇ ಆ ಎರಡು ಜೋಡಿಗೂ ಔತಣ ಕೂಟ ಏರ್ಪಡಿಸುತ್ತೇನೆ‘ ಎಂದು ಅವರು ಹೇಳಿದ್ದಾರೆ.

ಹರಿಯಾಣದಲ್ಲಿ ಕೋವಿಡ್ ರೋಗಿಗಳ ಸಾವು: ಆಮ್ಲಜನಕ ಕೊರತೆಯ ಆರೋಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.