ಪ್ರಯಾಗರಾಜ್: ಮಾಘಮೇಳದ ಅಂಗವಾಗಿ ಮೌನಿ ಅಮಾವಾಸ್ಯೆ ದಿನವಾದ ಭಾನುವಾರ ತ್ರಿವೇಣಿ ಸಂಗಮದಲ್ಲಿ 4.52 ಕೋಟಿಗೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿದರು.

ಮಧ್ಯರಾತ್ರಿಯಿಂದಲೇ ಭಕ್ತರ ದಂಡು ಗಂಗಾ ಮತ್ತು ಸಂಗಮ ಘಾಟ್ ಕಡೆಗೆ ಹರಿದುಬಂದಿತ್ತು. ದಟ್ಟಮಂಜಿನ ನಡುವೆಯೂ ಭಕ್ತರು ತೀರ್ಥಸ್ನಾನ ಮಾಡಿದರು.

ಭಕ್ತ ಸಮೂಹದ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು.

ಗೊಂದಲ: ಅಪಾರ ಬೆಂಬಲಿಗರೊಂದಿಗೆ ತೀರ್ಥಸ್ನಾನಕ್ಕೆ ಆಗಮಿಸಿದ ಜೋತಿರ್ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಅವರನ್ನು ಪೊಲೀಸರು ತಡೆದ ಕಾರಣ, ಕೆಲ ಸಮಯ ಗೊಂದಲ ಉಂಟಾಯಿತು.

ಈ ಕುರಿತ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ‘ಸ್ವಾಮೀಜಿಯವರಿಗೆ ಅಗೌರವ ತೋರಿರುವ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.