‘ನವ ಭಾರತದಲ್ಲಿ ಮಾತಿಗೆ ಅವಕಾಶವಿಲ್ಲ’
‘ಮೋದಿ ಅವರು ಹೇಳಿರುವುದನ್ನು ಬೆಂಬಲಿಸಿ ಮಾತನಾಡಲು ಬಯಸಿದ್ದೆ’ ಎಂದು ರಾಹುಲ್ ಗಾಂಧಿ ಅವರು ಸಂಸತ್ತಿನ ಹೊರಗೆ ಸುದ್ದಿಗಾರರಲ್ಲಿ ತಿಳಿಸಿದರು. ‘ಕುಂಭ ಮೇಳವು ನಮ್ಮ ಸಂಪ್ರದಾಯ, ಇತಿಹಾಸ ಮತ್ತು ಸಂಸ್ಕೃತಿ. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಅವರು ಶ್ರದ್ಧಾಂಜಲಿ ಸಲ್ಲಿಸದ್ದಕ್ಕೆ ನಮ್ಮ ಆಕ್ಷೇಪ ಇದೆ. ನಾನು ಇನ್ನೊಂದು ವಿಷಯ ಹೇಳಲು ಬಯಸಿದ್ದೆ. ಕುಂಭಕ್ಕೆ ಹೋದ ಯುವಕರಲ್ಲಿ ಎಷ್ಟೋ ಮಂದಿ ನಿರುದ್ಯೋಗಿ ಗಳಿದ್ದು, ಅವರಿಗೆ ಉದ್ಯೋಗ ದೊರಕಿಸಿಕೊಡಲು ಪ್ರಧಾನಿ ಕ್ರಮವಹಿಸ ಬೇಕು’ ಎಂದರು. ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಬೇಕು. ಆದರೆ ನಮಗೆ ಅನುಮತಿ ನೀಡಲಿಲ್ಲ. ಇದು ನವ ಭಾರತ’ ಎಂದು ಹೇಳಿದರು.