ನವದೆಹಲಿ: ಮಹದೇವ್ ಆನ್ಲೈನ್ ಬೆಟ್ಟಿಂಗ್ ಆ್ಯಪ್ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು(ಇ.ಡಿ) 'ಈಸಿ ಮೈ ಟ್ರಿಪ್' ಸಂಸ್ಥಾಪಕ ನಿಶಾಂತ್ ಪಿಟ್ಟಿ ಅವರಿಗೆ ಸೇರಿದ ಸ್ಥಳಗಳು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದೆ.

ದೆಹಲಿ, ಮುಂಬೈ, ಚಂಡೀಗಢ, ಅಹಮದಾಬಾದ್, ಇಂದೋರ್, ಜೈಪುರ, ಚೆನ್ನೈ ಮತ್ತು ಸಂಬಲ್ಪುರದಲ್ಲಿ ಇ.ಡಿ ದಾಳಿ ನಡೆಸಿದೆ.

ಛತ್ತೀಸಗಢದ ಹಲವು ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಆ್ಯಪ್ಗೆ ಸಂಬಂಧಿಸಿದ ಅಕ್ರಮ ಕಾರ್ಯಾಚರಣೆ ಮತ್ತು ನಂತರದ ಹಣಕಾಸು ವಹಿವಾಟುಗಳಲ್ಲಿ ಭಾಗಿಯಾಗಿದ್ದಾರೆಂದು ಕೆಲವು ವರ್ಷಗಳ ಹಿಂದೆ ಇ.ಡಿ ಹೇಳಿಕೆ ಬಿಡುಗಡೆ ಮಾಡಿದ ಬಳಿಕ ಈ ಪ್ರಕರಣವು ಭಾರಿ ಸುದ್ದಿಯಾಗಿತ್ತು.

ಪ್ರಕರಣದಲ್ಲಿ ಈ ಹಿಂದೆಯೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಮಹದೇವ್ ಆನ್ಲೈನ್ ಬೆಟ್ಟಿಂಗ್ (ಎಂಒಬಿ) ಗೇಮಿಂಗ್ ಮತ್ತು ಬೆಟ್ಟಿಂಗ್ ಆ್ಯಪ್ನಲ್ಲಿನ ಅಕ್ರಮದಲ್ಲಿ ಛತ್ತೀಸಗಢದ ವಿವಿಧ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭಾಗಿಯಾಗಿರುವುದು ಕಂಡುಬಂದಿದೆ ಎಂದು ಇ.ಡಿ ಈ ಹಿಂದೆ ಆರೋಪಿಸಿತ್ತು. ಈ ಆ್ಯಪ್ನ ಇಬ್ಬರು ಪ್ರವರ್ತಕರಾದ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.

ಅಕ್ರಮ ಬೆಟ್ಟಿಂಗ್ ವೆಬ್ಸೈಟ್ಗಳಿಗೆ ಹೊಸ ಬಳಕೆದಾರರನ್ನು ದಾಖಲಿಸಲು, ಐಡಿಗಳನ್ನು ರಚಿಸಲು ಮತ್ತು ಹಣ ವರ್ಗಾವಣೆ ಮಾಡಲು ಮಹದೇವ್ ಆ್ಯಪ್ ಅನುಕೂಲ ಮಾಡಿಕೊಡುತ್ತಿತ್ತು ಎಂದು ಇ.ಡಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.