ಲಾತೂರ್: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ವ್ಯಕ್ತಿಯೊಬ್ಬ ವಿದ್ಯುನ್ಮಾನ ಮತಯಂತ್ರ(ಇವಿಎಂ) ವಿರುದ್ಧದ ತಮ್ಮ ವಿರೋಧವನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ.

ಚಾಕುರ್ ತಹಸಿಲ್ ಅಜನ್ಸೊಂಡದ ನಿವಾಸಿ ದೀಪಕ್ ಕಾಂಬ್ಳೆ, ‘ಇವಿಎಂ ನಿಷೇಧಿಸಿ, ಪ್ರಜಾಪ್ರಭುತ್ವ ಉಳಿಸಿ’ ಎಂಬ ಸಂದೇಶವನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದ್ದಾರೆ.

‘ಈ ಚಳವಳಿ 2024ರ ಲೋಕಸಭಾ ಚುನಾವಣೆಗೂ ಮುನ್ನವೇ ಆರಂಭವಾಗಿದೆ. ನಮ್ಮ ಸಂಬಂಧಿಕರು ಮತ್ತು ಸ್ನೇಹಿತರಲ್ಲಿ ಜಾಗೃತಿ ಮೂಡಿಸಲು ಆಹ್ವಾನ ಪತ್ರಿಕೆಯಲ್ಲೇ ನನ್ನ ಪ್ರತಿಭಟನಾ ಪದಗಳನ್ನು ಮುದ್ರಿಸಿದೆ’ಎಂದು ಕಾಂಬ್ಳೆ ಪಿಟಿಐಗೆ ತಿಳಿಸಿದ್ದಾರೆ.

ಅಖಿಲ ಭಾರತ ಹಿಂದುಳಿದ(ಎಸ್‌ಸಿ,ಎಸ್‌ಟಿ ಮತ್ತು ಪಬೊಸೊ) ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಒಕ್ಕೂಟ(ಬಿಎಎಂಸಿಎಎಫ್) ಸದಸ್ಯರಾಗಿರುವ ಕಾಂಬ್ಳೆ, ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು ಮುಂತಾದವರ ಚಿತ್ರಗಳನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.