ಸೋನೆಪತ್ ಎಂಬಲ್ಲಿ ಸೆ. 12ರಂದು ಇಬ್ಬರು ಅಪ್ರಾಪ್ತರು ಸೇರಿ ಮೂವರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರು. ಘಟನೆಯಿಂದ ನೊಂದಿದ್ದ ಸಂತ್ರಸ್ತ ಬಾಲಕಿ ಎರಡು ದಿನಗಳ ನಂತರ ಸೆ. 14ರಂದು ವಿಷ ಸೇವಿಸಿದ್ದಳು. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಸೋಮವಾರ ಸಂಜೆ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.