ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರಾವತಿ ಔಷಧ ವ್ಯಾಪಾರಿ ಹತ್ಯೆ ಆರೋಪಿ ಪಶು ವೈದ್ಯನ ಜಾಮೀನು ಅರ್ಜಿ ವಜಾ

Published 17 ಜುಲೈ 2023, 14:36 IST
Last Updated 17 ಜುಲೈ 2023, 14:36 IST
ಅಕ್ಷರ ಗಾತ್ರ

ಮುಂಬೈ: ಅಮರಾವತಿ ಮೂಲದ ಔಷಧ ವ್ಯಾಪಾರಿ ಉಮೇಶ್ ಕೊಲ್ಹೆ ಕೊಲೆ ಪ್ರಕರಣದ ಆರೋಪಿ ಪಶು ವೈದ್ಯ ಯೂಸುಫ್ ಖಾನ್‌ ಅವರ ಜಾಮೀನು ಅರ್ಜಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ‌ಇವರ ವಿರುದ್ಧದ ಆರೋಪಗಳು ಸತ್ಯ ಎಂಬುದಕ್ಕೆ ನಂಬಲರ್ಹ ಪುರಾವೆಗಳಿವೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಎನ್‌ಐಎ ವಿಶೇಷ  ನ್ಯಾಯಾಲಯದ ನ್ಯಾಯಾಧೀಶ ರಾಜೇಶ್‌ ಕಟಾರಿಯಾ ಅವರು ಜುಲೈ 12ರಂದು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು. ವಿವರವಾದ ತೀರ್ಪು ಸೋಮವಾರ ಲಭ್ಯವಾಗಿದೆ.

ಕೊಲ್ಹೆ ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅಮಾನತುಗೊಂಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಬೆಂಬಲಿಸುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇದೇ ಕಾರಣಕ್ಕಾಗಿ  2022ರ ಜೂನ್ 21ರಂದು ಕೊಲ್ಹೆ ಅವರನ್ನು ಕೊಲೆ ಮಾಡಲಾಗಿತ್ತು.  ಜುಲೈ 2ರಂದು ಎನ್‌ಐಎ ಪ್ರಕರಣ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT