ಲಾಥೂರ್ : ಗ್ರಾಮ ಪಂಚಾಯತಿ ವಿಧಿಸುವ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸುವವರಿಗೆ ₹10 ಲಕ್ಷದ ಅಪಘಾತ ವಿಮೆ ನೀಡಲು ಮಹಾರಾಷ್ಟ್ರದ ಲಾಥೂರ್ ಜಿಲ್ಲೆಯ ಪಂಚಿನ್ಚೋಲಿ ಗ್ರಾಮ ಪಂಚಾಯತಿ ನಿರ್ಧರಿಸಿದೆ.

ಶುಕ್ರವಾರ ನಡೆದ ಗ್ರಾಮ ಪಂಚಾಯತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗ್ರಾಮದ ಸರಪಂಚರಾದ ಗೀತಾಂಜಲಿ ಹನುಮಂಟೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತಿಯ ಹಿಂದಿನ ಸರಪಂಚರಾದ ಶ್ರೀಕಾಂತ್ ಸಾಲುಂತೆ ಈ ಪ್ರಸ್ತಾವವನ್ನು ಸಭೆಯ ಮುಂದಿಟ್ಟರು. ಇದಕ್ಕೆ ಸದಸ್ಯರ ಅನುಮೋದನೆಯೂ ದೊರಕಿತು.

ಪಂಚಿಂಚೋಲಿ ಗ್ರಾಮದಲ್ಲಿ 5,947 ಜನಸಂಖ್ಯೆ ಇದೆ. ಸುಮಾರು 930 ತೆರಿಗೆದಾರಿದ್ದಾರೆ. ಗ್ರಾಮಸ್ಥರು ತೆರಿಗೆ ಪಾವತಿಸಲು ಉತ್ತೇಜಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶ್ರೀಕಾಂತ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.