ಆಲಪ್ಪುಳ: ಆಲಪ್ಪುಳ ಜಿಲ್ಲೆಯ ಹರಿಪ್ಪಾಡ್ ದೇವಾಲಯದ ಆನೆ ತುಳಿದು ಮಾವುತ ಮೃತಪಟ್ಟಿದ್ದಾರೆ. ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಆಲಪ್ಪುಳ ಜಿಲ್ಲೆಯ ಇಡಪೊನ್ಮುರಿಯ ಮುರಳೀಧರನ್ ನಾಯರ್ (53) ಎಂದು ಗುರುತಿಸಲಾಗಿದೆ. ಇವರು ಹರಿಪ್ಪಾಡ್ನ ಸುಬ್ರಮಣ್ಯ ದೇವಾಲಯಕ್ಕೆ ಸೇರಿದ ಸ್ಕಂದನ್ ಆನೆಯ ಮಾವುತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮದವೇರಿದ್ದ ಆನೆಯನ್ನು ಕೆಲವು ತಿಂಗಳಿನಿಂದ ದೇಗುಲದ ಅರ್ಚಕರ ಮನೆಯಲ್ಲಿ ಕಟ್ಟಿಹಾಕಲಾಗಿತ್ತು. ಭಾನುವಾರ ಪುಂಡಾಟ ನಡೆಸಿದ ಆನೆ ಮಾವುತ ಸುನೀಲ್ ಕುಮಾರ್ ಮೇಲೆ ದಾಳಿ ಮಾಡಿತು. ಸ್ಥಳಕ್ಕೆ ಧಾವಿಸಿ ಆನೆಯನ್ನು ನಿಯಂತ್ರಣಕ್ಕೆ ತಂದ ಮುರಳೀಧರನ್, ದೇವಾಲಯಕ್ಕೆ ಸ್ಥಳಾಂತರಿಸಿದ್ದಾರೆ. ಬಳಿಕ ಆನೆ ಮತ್ತೊಮ್ಮೆ ಮುರಳೀಧರನ್ ಮೇಲೆ ದಾಳಿ ಮಾಡಿತು.

ಕೆಲನಿಮಿಷಗಳ ಕಾಲ ಮುರಳೀಧರನ್ ಅವರನ್ನು ಆನೆ ನೆಲಕ್ಕೆ ಒತ್ತಿಹಿಡಿಯಿತು. ಬಳಿಕ ಇತರ ಮಾವುತರು ಆನೆಯನ್ನು ನಿಯಂತ್ರಿಸಿ, ಮುರಳೀಧರನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಅವರು ಮೃತಪಟ್ಟರು. ಗಾಯಗೊಂಡಿದ್ದ ಮತ್ತೊಬ್ಬ ಮಾವುತ ಸುನೀಲ್ ಅವರ ಸ್ಥಿತಿಯು ಗಂಭೀರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.