ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ– ಮಾಲ್ದೀವ್ಸ್‌ ನಡುವೆ 20 ಒಪ್ಪಂದಗಳಿಗೆ ಸಹಿ

Published 10 ಜನವರಿ 2024, 16:04 IST
Last Updated 10 ಜನವರಿ 2024, 16:04 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರನ್ನು ಬುಧವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಉಭಯ ದೇಶಗಳ ನಡುವಣ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ನಾಯಕರಿಬ್ಬರೂ 20 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದರು.

‘ಮಾಲ್ದೀವ್ಸ್‌ ಸರ್ಕಾರ ಮತ್ತು ಚೀನಾ ಸರ್ಕಾರದ ನಡುವೆ ಮಹತ್ವದ 20 ಒಪ್ಪಂದಗಳಿಗೆ ಬುಧವಾರ ಮಧ್ಯಾಹ್ನ ಅಂಕಿತ ಹಾಕಲಾಯಿತು. ಉಭಯ ದೇಶಗಳ ಅಧ್ಯಕ್ಷರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು’ ಎಂದು ಮಾಲ್ದೀವ್ಸ್‌ ಅಧ್ಯಕ್ಷರ ಕಚೇರಿಯು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದೆ. 

ಭಾರತ ಮತ್ತು ಮಾಲ್ದೀವ್ಸ್‌ ನಡುವೆ ಬಿಕ್ಕಟ್ಟು ಉಂಟಾಗಿರುವ ನಡುವೆಯೇ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಚೀನಾ ಭೇಟಿ ನೀಡಿದ್ದಾರೆ. ಚೀನಾ ಅಧ್ಯಕ್ಷ ಮತ್ತು ಅವರ ಪತ್ನಿಯಿಂದ ಮುಯಿಜು ದಂಪತಿಗೆ ಬೀಜಿಂಗ್‌ನ ‘ಗ್ರೇಟ್‌ ಹಾಲ್‌ ಆಫ್‌ ‍ದಿ ಪೀಪಲ್‌’ಗೆ ಭವ್ಯ ಸ್ವಾಗತ ದೊರಕಿತು. ಅವರಿಗೆ ಗೌರವ ನಮನ ಸಲ್ಲಿಸಿ, ಕೆಂಪುಹಾಸಿನ ಸ್ವಾಗತ ಕೋರಲಾಯಿತು.

ಬಳಿಕ ಷಿ ಜಿನ್‌ಪಿಂಗ್‌ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಮುಯಿಜು ದಂಪತಿಗೆ ಗೌರವಾತಿಥ್ಯ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT