ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿ ವಯಸ್ಸಿನಲ್ಲಿ ದೇವೇಗೌಡರಿಗೆ ದಿಢೀರ್ ಆಗಿ ಏನಾಯ್ತು: ಖರ್ಗೆ ಪ್ರಶ್ನೆ

Published 8 ಫೆಬ್ರುವರಿ 2024, 23:30 IST
Last Updated 8 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ‘ಎಚ್‌.ಡಿ.ದೇವೇಗೌಡರು ಇಡೀ ಬದುಕನ್ನು ಜಾತ್ಯತೀತತೆ, ಸಮಾಜವಾದಕ್ಕಾಗಿ ಮತ್ತು ರೈತರ ಹಿತಾಸಕ್ತಿ ರಕ್ಷಿಸಲು ಕಳೆದರು. ಈ ಇಳಿ ವಯಸ್ಸಿನಲ್ಲಿ ಏಕಾಏಕಿ ಅವರಿಗೆ ಏನಾಯಿತೋ ತಿಳಿಯದು..’

ರಾಜ್ಯಸಭೆಯ ಅವಧಿಯನ್ನು ಪೂರೈಸುತ್ತಿರುವ 68 ಸದಸ್ಯರಿಗೆ ಗುರುವಾರ ಸದನದಲ್ಲಿ ಬೀಳ್ಕೊಡುಗೆ ಭಾಷಣ ಮಾಡಿದ ವಿರೋಧಪಕ್ಷ ನಾಯಕ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಈ ಮಾತು ಹೇಳಿದರು.

ತಮ್ಮ ಭಾಷಣದಲ್ಲಿ ಖರ್ಗೆ ಅವರು ಗೌಡರ ಜೊತೆಗಿನ ಸುದೀರ್ಘ ಅವಧಿಯ ಬಾಂಧವ್ಯವನ್ನು ಮೆಲುಕು ಹಾಕಿದರು. ಖರ್ಗೆ ಅವರ ಮಾತುಗಳು ಒಂದು ಹಂತದಲ್ಲಿ ಸದಸ್ಯರಲ್ಲಿ ನಗು ಮೂಡಿಸಿತು. 

‘ಗೌಡರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರನ್ನು ಅತಿಯಾಗಿ ಹೊಗಳುತ್ತಿದ್ದಾರೆ. ಅಪ್ಪಿಕೊಳ್ಳುತ್ತಿದ್ದಾರೆ. ಗೌಡರಿಗೆ ಯಾರನ್ನು ಹೊಗಳುವ ಹವ್ಯಾಸವೇ ಇಲ್ಲ. ಅಂತಹವರಿಗೆ ಈ ಇಳಿವಯಸ್ಸಿನಲ್ಲಿ ಏನಾಯಿತೊ? ಅವರ ಹವ್ಯಾಸ ಬದಲಾಗಲು ಕಾರಣವಾದುದಾದರೂ ಏನು’ ಎಂದೂ ಖರ್ಗೆ ಪ್ರಶ್ನಿಸಿದರು.

ಈ ಮಾತಿಗೆ ಪಕ್ಷಭೇದವಿಲ್ಲದೆ ಸದಸ್ಯರು ನಕ್ಕರು. ಸದನದಲ್ಲಿದ್ದ ಪ್ರಧಾನಿ ಮೋದಿ ಅವರೂ ಈ ನಗುವಿನಲ್ಲಿ ಭಾಗಿಯಾದರು.

ಸದ್ಯ, ಅವಧಿಯನ್ನು ಪೂರೈಸುತ್ತಿರುವ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ 10 ವರ್ಷಗಳ ಆಡಳಿತಾವಧಿಯ ಸಾಧನೆಗಳನ್ನು ಖರ್ಗೆ ಅವರು ಇದೇ ಸಂದರ್ಭದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದರು. 

ಕೆಲ ಸದಸ್ಯರ ಆರ್ಥಿಕ ಸ್ಥಿತಿ ಕುರಿತು ಗಮನಸೆಳೆದ ಖರ್ಗೆ ಅವರು, ನಿವೃತ್ತಿಯ ಬಳಿಕ ಬದುಕು ಸಾಗಿಸಲು ಕೆಲವರಿಗೆ ಹಣದ ಸಮಸ್ಯೆ ಇರುತ್ತದೆ. ಸರ್ಕಾರ ಅಂತಹವರಿಗಾಗಿ ಏನಾದರೂ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT