ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುಣಾನಿಧಿಗೆ ಗಣ್ಯರ ಅಂತಿಮ ನಮನ

Last Updated 7 ಆಗಸ್ಟ್ 2018, 18:33 IST
ಅಕ್ಷರ ಗಾತ್ರ

ಚೆನ್ನೈ: ಅಣ್ಣಾ ಸಮಾಧಿ ಸಮೀಪವೇ ಕರುಣಾನಿಧಿ ಅವರ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಲು ತಮಿಳುನಾಡು ಸರ್ಕಾರ ನಿರಾಕರಿಸಿದ ಬೆನ್ನಲೇ ರಾಜ್ಯದ ಹಲವೆಡೆ ಡಿಎಂಕೆ ಕಾರ್ಯಕರ್ತರು, ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವು ಕಡೆ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿದೆ.

ಎರಡು ದಿನಗಳಿಂದ ಕಾವೇರಿ ಆಸ್ಪತ್ರೆಯ ಮುಂದೆ ಪ್ರಾರ್ಥನೆಯಲ್ಲಿ ನಿರತರಾಗಿದ್ದ ಕರುಣಾನಿಧಿ ಅವರ ಅಭಿಮಾನಿಗಳು ನೆಚ್ಚಿನ ನಾಯಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕಣ್ಣೀರ ಕಟ್ಟೆಯೊಡೆದು ರೋದಿಸಿದರು. ರಕ್ತಸಂಬಂಧಿಯನ್ನೇ ಕಳೆದುಕೊಂಡಂತಹ ದುಃಖ ತೀವ್ರತೆ, ಎದೆಬಡಿದುಕೊಂಡು ಅಳುತ್ತಿದ್ದ ಹೆಂಗಸರು, ಕೊನೆಯ ಬಾರಿಗೆ ಕಲೈಂಗರ್‌ನನ್ನು ಕಣ್ತುಂಬಿಕೊಳ್ಳಲು ಕಾದಿದ್ದ ಜನಸ್ತೋಮ...ಈ ಕ್ಷಣಗಳು ದ್ರಾವಿಡ ಸೂರ್ಯ ತಮಿಳುನಾಡು ಮತ್ತು ಜನರಿಗಾಗಿ ಮೀಸಲಿಟ್ಟ ಬದುಕಿನ ಕಥೆ ಹೇಳುವಂತಿತ್ತು.

ಕರುಣಾನಿಧಿ ಅವರ ನಿಧನ ಸುದ್ದಿ ಕೇಳಿ ನಾಗಪಟ್ಟಿನಂ ಮತ್ತು ಮಯಿಲಾದುಥಿರೈನ ಸುಬ್ರಮಣಿಯನ್‌ ಹಾಗೂ ರಾಜೇಂದ್ರನ್‌ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಹಿಂದುಸ್ತಾನ್‌ಟೈಮ್ಸ್‌ ವರದಿ ಮಾಡಿದೆ. ಮೃತರು ಸುಮಾರು ಐವತ್ತು ವರ್ಷ ವಯೋಮಾನವವರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಟ ರಜನಿಕಾಂತ್‌ ಸೇರಿ ಹಲವು ಗಣ್ಯರು ಗೋಪಾಲಪುರಂ ನಿವಾಸದಲ್ಲಿ ಕರುಣಾನಿಧಿ ಅವರ ಅಂತಿಮ ದರ್ಶನ ಪಡೆದರು.

ಬುಧವಾರ ಸಂಜೆ ಅಂತ್ಯ ಕ್ರಿಯೆ ನಡೆಯಲಿದ್ದು, ಸಮಾಧಿ ಮಾಡುವ ಸ್ಥಳ ಇನ್ನು ನಿರ್ಧಾರವಾಗಿಲ್ಲ. ಮರೀನಾ ಬೀಚ್‌ನಲ್ಲಿಯೇ ಅವಕಾಶ ನೀಡುವಂತೆ ಪ್ರತಿಭಟನೆಯ ಜತೆಗೆ ಮದ್ರಾಸ್‌ ಹೈಕೋರ್ಟ್‌ಗೂ ಮನವಿ ಸಲ್ಲಿಸಲಾಗಿದೆ. ‌ಗೋಪಾಪುರಂ ನಿವಾಸದಿಂದ ಮಧ್ಯರಾತ್ರಿ 1 ಗಂಟೆಯಿಂದ 3ರವರೆಗೂ ಸಿಐಟಿ ಕಾಲೋನಿ ನಿವಾಸದಲ್ಲಿ ಪಾರ್ಥೀವ ಶರೀರ ಇರಿಸಲಾಗುತ್ತದೆ. ಬೆಳಗಿನ ಜಾವ 4 ಗಂಟೆಯಿಂದ ರಾಜಾಜಿ ಹಾಲ್‌ನಲ್ಲಿ ಸಾರ್ವಜನಿಕರಿಗೆ ಕರುಣಾನಿಧಿ ಅವರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT