ಭದೋಹಿ (ಉತ್ತರಪ್ರದೇಶ): ಹದಿನಾರು ವರ್ಷದ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ 30 ವರ್ಷದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಮೇ 17ರಂದು ಬಾಲಕಿ ಬಹಿರ್ದೆಸೆಗೆ ಹೋದಾಗ ಘಟನೆ ನಡೆದಿದೆ. ಆರೋಪಿ ಜಿತೇಂದ್ರ ಪ್ರಜಾಪತಿ ಬಾಲಕಿಯ ಬಾಯಿ ಮುಚ್ಚಿ, ತನ್ನ ಮನೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾನೆ. ಬಳಿಕ ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಭದೋಹಿ ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಾಂಗ್ಲಿಕ್ ತಿಳಿಸಿದ್ದಾರೆ.

‘ರಾತ್ರಿಯಾದರೂ ಮನೆಗೆ ಮಗಳು ಬಾರದಿರುವುದನ್ನು ಕಂಡು ಪೋಷಕರು ಬಾಲಕಿಯನ್ನು ಹುಡುಕಲು ಆರಂಭಿಸಿದ್ದಾರೆ. ಬಾಲಕಿಯ ತಂದೆ ಕೆಲಸ ಮಾಡುವ ಪೆಟ್ರೋಲ್ ಪಂಪ್ಗೆ ಬಂದಿದ್ದ ಆರೋಪಿಯು, ತನ್ನ ಮನೆಯಲ್ಲಿರುವ ಮಗಳನ್ನು ಕರೆದುಕೊಂಡು ಹೋಗುವಂತೆ ಆಕೆಯ ತಂದೆಗೆ ಹೇಳಿದ್ದಾನೆ. ಅಲ್ಲದೇ ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಬೆದರಿಕೆ ಹಾಕಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ತಂದೆ ಮೊದಲು ಬೆದರಿಕೆಗೆ ಮತ್ತು ಸಮಾಜಕ್ಕೆ ಹೆದರಿ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಆದರೆ, ಬಾಲಕಿ ಪ್ರಜಾಪತಿಯ ವಿರುದ್ಧ ದೂರು ದಾಖಲಿಸದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದಾಳೆ. ಬಳಿಕ ಬಾಲಕಿಯ ತಂದೆ ಮೇ 25ರಂದು ಕೊಯಿರೌನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.