ಥಾಣೆ: ಮಾಜಿ ಸಹ ಜೀವನ (ಲಿವ್–ಇನ್ ರಿಲೇಷನ್ಶಿಪ್) ಸಂಗಾತಿಯ ಖಾಸಗಿ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
.ತಂದೆಯ ಉಳಿವಿಗಾಗಿ ಯಕೃತ್ನ ಭಾಗ ನೀಡಲು ಮುಂದಾದ ಬಾಲಕಿಗೆ ಅನುಮತಿ ನೀಡಿದ ಹೈಕೋರ್ಟ್.ಲೋಕಸಭೆಯಿಂದ ‘ಸೆಂಗೋಲ್’ ತೆಗೆಯಲು ಎಸ್ಪಿ ಸಂಸದನ ಆಗ್ರಹ: ಬಿಜೆಪಿ ಟೀಕೆ.
ಆರೋಪಿಯನ್ನು ಶಹಾಪುರದ 29 ವರ್ಷದ ಕಿರಣ್ ಬಾಗ್ರಾವ್ ಎಂದು ಗುರುತಿಸಲಾಗಿದೆ.

ಕಿರಣ್ನೊಂದಿಗೆ ಸಹ ಜೀವನ ನಡೆಸುತ್ತಿದ್ದ 49 ವರ್ಷದ ಮಹಿಳೆಯು ಇತ್ತೀಚೆಗೆ ಆತನ ಜತೆ ಸಂಬಂಧವನ್ನು ಮುರಿದುಕೊಂಡಿದ್ದರು. ಈ ವಿಚಾರಕ್ಕಾಗಿಯೇ ಆಕೆಯ ಖಾಸಗಿ ವಿಡಿಯೊವನ್ನು ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಶೇರ್ ಮಾಡಿದ್ದಾನೆ ಎಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

2022ರಿಂದ 2024ರ ಜನವರಿವರೆಗೆ ಮಜಿವಾಡದಲ್ಲಿ ಇಬ್ಬರು ಸಹ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
.ಲೋಕಸಭೆಯಿಂದ ‘ಸೆಂಗೋಲ್’ ತೆಗೆಯಲು ಎಸ್ಪಿ ಸಂಸದನ ಆಗ್ರಹ: ಬಿಜೆಪಿ ಟೀಕೆ.70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ: ಮುರ್ಮು.
ಸಂಬಂಧವನ್ನು ಮುರಿದುಕೊಂಡ ಬಳಿಕವೂ ಆಕೆಯನ್ನು ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದನು. ಆತನ ಬೇಡಿಕೆಯನ್ನು ನಿರಾಕರಿಸಿದ್ದರಿಂದ ತನ್ನ ಖಾಸಗಿ ವಿಡಿಯೊವನ್ನು ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಶೇರ್ ಮಾಡಿದ್ದಾನೆ ಎಂದು ಸಂತ್ರಸ್ತೆ ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸಹ ಜೀವನ ನಡೆಸುತ್ತಿದ್ದ ವೇಳೆ ಆಕೆ ಸ್ನಾನ ಮಾಡುವ ವಿಡಿಯೊವನ್ನು ಆರೋಪಿ ಚಿತ್ರೀಕರಿಸಿಕೊಂಡಿದ್ದನು. ಸಂಬಂಧ ಮುರಿದುಕೊಳ್ಳುವ ವೇಳೆ ಕೊಲೆ ಬೆದರಿಕೆಯೊಡ್ಡಿದ್ದನು. ಖಾಸಗಿ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
.ಪೆರೋಲ್ ಕೋರಿಕೆ ನಿಯಮ ಪ್ರಶ್ನಿಸಿದ ಪಿಐಎಲ್: ನೋಟಿಸ್.ಹೆಬ್ಬಾಳದ ಸಿಂಧಿ ಪ್ರೌಢಶಾಲೆ ಪಠ್ಯದಲ್ಲಿ ನಟಿ ತಮನ್ನಾ: ಪೋಷಕರ ವಿರೋಧ.
ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.