ವಯನಾಡ್: ವಯನಾಡ್ನ, ಕೇರಳ–ತಮಿಳುನಾಡು ಗಡಿಯಲ್ಲಿ ಕಾಡಾನೆಯ ದಾಳಿಗೆ, ತಮಿಳುನಾಡು ಮೂಲದ ಬುಡಕಟ್ಟು ಸಮುದಾಯದ 45 ವರ್ಷ ವಯಸ್ಸಿನ ಮನು ಎಂಬುವವರು ಮೃತಪಟ್ಟಿದ್ದಾರೆ.

ವ್ಯಕ್ತಿಯ ಸಾವಿನಿಂದ ಅಕ್ರೋಶಗೊಂಡ ಸ್ಥಳೀಯರು, ‘ಕಾಡಾನೆಗಳು ಸೇರಿದಂತೆ ಈ ಭಾಗದಲ್ಲಿ ವನ್ಯಜೀವಿಗಳ ಪಿಡುಗು ಹೆಚ್ಚಾಗಿದೆ. ಇದನ್ನು ತಡೆಯಬೇಕು’ ಎಂದು ಆಗ್ರಹಿಸಿ ಮಂಗಳವಾರ ಪ್ರತಿಭಟಿಸಿದರು.

‘ಇಲ್ಲಿ ಕುಡಿಯುವ ನೀರಿನ ಪೂರೈಕೆ ಇಲ್ಲ. ನೀರಿಗೆ ಹತ್ತಿರದ ಜಲಮೂಲವನ್ನೇ ಆಶ್ರಯಿಸಬೇಕು. ಅಲ್ಲಿಗೆ ಅನೆಗಳು ನೀರು ಕುಡಿಯಲು ಬರುತ್ತವೆ. ಹೊರಹೋಗುವುದೇ ಕಷ್ಟ’ ಎಂದು ನಿವಾಸಿಯೊಬ್ಬರು ಅಳಲು ತೋಡಿಕೊಂಡರು.

ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಶವವನ್ನು ತೆಗೆಯುವುದಿಲ್ಲ ಎಂದು ಪಟ್ಟುಹಿಡಿದು ಪ್ರತಿಭಟಿಸಿದರು. ವಯನಾಡ್ ವನ್ಯಜೀವಿ ಅಧಿಕಾರಿಗಳ ಕಚೇರಿ ಬಳಿ ಯುಡಿಎಫ್ ಕಾರ್ಯಕರ್ತರೂ ಪ್ರತಿಭಟಿಸಿದರು.

ಗಡಿ ಭಾಗದಲ್ಲಿ ಭತ್ತದ ಗದ್ದೆಯಲ್ಲಿ ಮೃತನ ಶವ ಪತ್ತೆಯಾಗಿದೆ. ಬಹುಶಃ ಸೋಮವಾರ ಆತ ಮೃತಪಟ್ಟಿರಬಹುದು ಎಂದು ಪೊಲೀಸರು ತಿಳಿಸಿದರು. ‘ಆನೆ ದಾಳಿಯಿಂದಲೇ ಆತ ಮೃತಪಟ್ಟಿದ್ದಾರೆ’ ಎಂದು ಸ್ಥಳೀಯರು ದೂರಿದರು.

ರೈತರ ಸಾವು:

ಉತ್ತರ ಪ್ರದೇಶದ ಕತರ್ನಿಯಾಘಾಟ್ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 75 ವರ್ಷದ ರೈತರೊಬ್ಬರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.