ನವದೆಹಲಿ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆ ಮಾಡಿದ್ದ ಯುವಕನಿಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
2017ರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಕೃತ್ಯ ಎಸಗಿಸ ಸಮಯದಲ್ಲಿ ಯುವಕ ಬಾಲಾಪರಾಧಿಯಾಗಿದ್ದ. ಇದೀಗ ಆತ 25 ವರ್ಷದ ವಯಸ್ಕನಾಗಿದ್ದಾನೆ.
ಪ್ರಕರಣದಲ್ಲಿ ಯುವಕ ತಪ್ಪಿತಸ್ಥನಾಗಿದ್ದಾನೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತ್ ಸಹ್ರಾವತ್ ಅವರು ₹10,000 ದಂಡ ಮತ್ತು ಜೀವಾವಧಿ ಮತ್ತು 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಬಾಲಕಿಯ ಪೋಷಕರಿಗೆ ₹17 ಲಕ್ಷ ಪರಿಹಾರ ಘೋಷಿಸಲಾಗಿದೆ.