ಅಮೃತಸರ: ಮನೆಯಲ್ಲಿ ಯಾರಿಗೂ ಹೇಳದೆ ಹೊರಹೋದ ಕಾರಣಕ್ಕೆ ಕುಪಿತನಾದ ತಂದೆ 20 ವರ್ಷದ ಮಗಳನ್ನು ಹತ್ಯೆ ಮಾಡಿ, ಮೃತದೇಹವನ್ನು ಬೈಕ್‌ಗೆ ಕಟ್ಟಿ ಗ್ರಾಮದೆಲ್ಲೆಡೆ ಎಳೆದೊಯ್ದು ಕೊನೆಗೆ ರೈಲ್ವೆ ಹಳಿಯತ್ತ ಎಸೆದಿದ್ದಾನೆ.
ಮುಚ್ಚಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳು ಬುಧವಾರ ಮನೆಯಿಂದ ಹೊರಹೋಗಿದ್ದು, ಗುರುವಾರ ಹಿಂದಿರುಗಿದ್ದಾಳೆ. ಇದರಿಂದ ಕುಪಿತನಾದ ತಂದೆ ಬಾವ್, ಹರಿತ ಆಯುಧದಿಂದ ಆಕೆಯನ್ನು ಹತ್ಯೆ ಮಾಡಿದ್ದಾನೆ. ಮೃತದೇಹವನ್ನು ಆತ ಬೈಕ್‌ಗೆ ಮೃತದೇಹ ಕಟ್ಟಿ ಎಳೆದೊಯ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಡಿಎಸ್ಪಿ ಕುಲದೀಪ್ ಸಿಂಗ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.